ಪಂಜ : ನಿರ್ಗಮಿತ ಪಿ.ಡಿ.ಒ ಶ್ರೀಧರ್ ಕೆ.ಆರ್.ರವರಿಗೆ ಸನ್ಮಾನ -ನೂತನ ಪಿ.ಡಿ.ಒ ಶ್ರೀಮತಿ ಚಂದ್ರಾವತಿ ರೈ ರವರಿಗೆ ಸ್ವಾಗತ ಕಾರ್ಯಕ್ರಮ

0


ಪಂಜ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ವತಿಯಿಂದ ಗ್ರಾಮ ಪಂಚಾಯತಿಯ ನಿರ್ಗಮಿತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೆ.ಆರ್ ರವರಿಗೆ ಸನ್ಮಾನ ಮತ್ತು ನೂತನ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ ರೈ, ಕಾರ್ಯದರ್ಶಿ ಗೋಪಾಲಕೃಷ್ಣ ರವರಿಗೆ ಸ್ವಾಗತ ಕಾರ್ಯಕ್ರಮ ಆ.
9 ರಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆಯವರ ಅಧ್ಯಕ್ಷತೆಯ ಮೊದಲ ಅವಧಿಯ ಕೊನೆಯ
ವಿಶೇಷ ಸಭೆಯಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಸದಸ್ಯರಾದ ಜಗದೀಶ್ ಪುರಿಯ, ಶ್ರೀಮತಿ ವೀಣಾ ಪಂಜ, ಶ್ರೀಮತಿ ದಿವ್ಯ ಪುಂಡಿಮನೆ, ಲಕ್ಷ್ಮಣ ಗೌಡ ಬೊಳ್ಳಾಜೆ, ಶ್ರೀಮತಿ ಮಲ್ಲಿಕಾ ಅಳ್ಪೆ, ನಾರಾಯಣ ಕೃಷ್ಣನಗರ, ಚಂದ್ರಶೇಖರ ದೇರಾಜೆ, ಲಿಖಿತ್ ಪಲ್ಲೋಡಿ, ಶರತ್ ಕುದ್ವ, ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಕಲ್ಕ, ಶ್ರೀಮತಿ ಪ್ರಮೀಳಾ ಸಂಪ ,ನೂತನ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ ರೈ. ನೂತನ ಕಾರ್ಯದರ್ಶಿ ಗೋಪಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಿಗೋಧರ ಆಚಾರ್ಯ ನಾಯರ್ ಕೆರೆ, ಮಾಜಿ ಸದಸ್ಯರಾದ ಪ್ರಕಾಶ್ ಜಾಕೆ, ಲೋಕೇಶ್ ಬರೆಮೇಲು, ಶ್ರೀಮತಿ ನಿರ್ಮಲ ಪಲ್ಲೋಡಿ, ಶ್ರೀಮತಿ ಮಂಜುಳಾ ಅತ್ಯಡ್ಕ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಚಿನ್ನಪ್ಪ ಚೊಟ್ಟೆಮಜಲು, ಕಂದಾಯ ಇಲಾಖೆಯ ಆರ್ ಐ ಚಂದ್ರು ನಾಯ್ಕ್ , ಗ್ರಾಮ ಲೆಕ್ಕಾಧಿಕಾರಿ ದುರ್ಗಪ್ಪ

ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ಕೃಷಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.