ಮಂಗಳೂರಿನ ಮ್ಯಾಕೊ ಕೋ–ಆಪರೇಟಿವ್ ಸೊಸೈಟಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಪಿ.ಸಿ.ಸಿ.ವಕ್ತಾರರು ಹಾಗೂ ಸುಳ್ಯದ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಪ್ರಮುಖ ಕಾರ್ಮಿಕ ವರ್ಗವಾದ ಆಟೋ ರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘವಾಗಿರುವ ಮ್ಯಾಕೊ 1975 ರಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ದಿವಂಗತ ಬ್ಲೇಸಿಯಸ್ ಎಂ.ಡಿ’ಸೋಜಾರವರು ಸ್ಥಾಪಕಾಧ್ಯಕ್ಷರಾಗುವ ಮೂಲಕ ಮಂಗಳೂರಿನ ಬಲ್ಮಠದಲ್ಲಿ ಪ್ರಾರಂಭಗೊಂಡು, ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕರಾದ ಐವನ್ ಡಿ’ಸೋಜಾರವರು ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಪೆಟ್ರೋಲ್ ಬಂಕ್ ಹಾಗೂ ಬ್ಯಾಂಕಿಂಗ್ ವ್ಯವಹಾರದಲ್ಲಿ ಗ್ರಾಹಕರ ವಿಶ್ವಾಸಾರ್ಹತೆಯೊಂದಿಗೆ ಕಳೆದ 48 ವರ್ಷಗಳಿಂದ ಮ್ಯಾಕೊ ಸೊಸೈಟಿಯು ಕಾರ್ಯನಿರ್ವಹಿಸುತ್ತಿದೆ.