ಅರಂತೋಡು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

.

ಆರಂತೋಡು ಗ್ರಾಮ ಪಂಚಾಯತ್ ನಲ್ಲಿ ಸ್ವತಂತ್ರ್ಯ ದಿನಾಚರಣೆ ಆರಂತೋಡು ಗ್ರಾಮ ಪಂಚಾಯತ್ ನಲ್ಲಿ 76 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಗ್ರಾ.ಪಂ.ಅಧ್ಯಕ್ಷೆ ಹರಿಣಿ ದೇರಾಜೆ ಧ್ವಜಾರೋಹಣ ಗೈದರು. ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಶ್ವೇತಾ,ನೂತನ ಅಧ್ಯಕ್ಷ ಕೇಶವ ಅಡ್ತಲೆ,ಉಪಾಧ್ಯಕ್ಷ ಭವಾನಿ,ಸೇರಿದಂತೆ ಪಂಚಾಯತ್ ಸದಸ್ಯರು,ಮಾಜಿ ಯೋಧರು,ಊರಿನ ಪ್ರಮುಖ ಗಣ್ಯರು ಇದ್ದರು.

ಕಾರ್ಯಕ್ರಮದ ಪ್ರಯುಕ್ತ ನೂತನ ಅಧ್ಯಕ್ಷ ಕೇಶವ ಅಡ್ತಲೆ ಗಿಡ ನೆಟ್ಟರು.ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಜೆ ರವರು ನಮಫಲಕವನ್ನು ಉದ್ಘಾಟಿಸಿದರು.ಆರಂತೋಡು ಗ್ರಾಮದ ಪಂಚಾಯತ್ ಅಭಿವೃಧಿ ಅಧಿಕಾರಿ ಜಯಪ್ರಕಾಶ್ ಸ್ವಾಗತಿಸಿ ಪ್ರತಿಜ್ಞೆ ಬೋಧಿಸಿದರು .