ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ವಾತಂತ್ರ್ಯೋತ್ಸವ

0

ಯೋಧರಿಗೆ ಸನ್ಮಾನ

ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮತ್ತು ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.


ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಧ್ವಜಾರೋಹಣ ನೆರವೇರಿಸಿ, ನಿವೃತ್ತ ಯೋಧರಾದ ಸುಬೇದಾರ್ ಜಯರಾಮ‌ ಜಿ.ಕೆ ಮತ್ತು ಸಿ.ಆರ್.ಪಿ.ಎಫ್. ನಿವೃತ್ತ ಕೃಷ್ಣೇ ಗೌಡರನ್ನು ಸನ್ಮಾನಿಸಿ, ಶುಭಾಶಯ ಕೋರಿದರು. ಎ.ಒ.ಎಲ್.ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ನಿರ್ದೇಶಕಿ ಶ್ರೀಮತಿ ಶೋಭ ಚಿದಾನಂದ, ಡಾ. ಐಶ್ವರ್ಯ ಸೇರಿದಂತೆ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಧ್ವಜವಂದನೆ ಸಲ್ಲಿಸಿದರು.