ಪಂಜ ಸರಕಾರಿ ಮಾದರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಜಾರುಬಂಡಿ ಹಸ್ತಾಂತರ

0

ಜೇಸಿಐ ಪಂಜ ಪಂಚಶ್ರೀ , ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ ಇದರ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಜಾರುಬಂಡಿ ಹಸ್ತಾಂತರ ಕಾರ್ಯಕ್ರಮವು ಆ. 15 ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜದಲ್ಲಿ ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ವಹಿಸಿಕೊಂಡರು. ಜಾರುಬಂಡಿಯ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಡಾ.ಪ್ರಕಾಶ್ ಡಿ’ಸೋಜಾ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಜಾರುಬಂಡಿ ಪ್ರಾಯೋಜಕರಾದ ಶ್ರೀಮತಿ ಪೂರ್ಣಿಮಾ ಡಿ.ಪ್ರಸಾದ್ ಮಾಲಕರು ಜಾಕೆ ಫ್ಯಾಷನ್ ಪಂಜ ವಹಿಸಿದರು. ಅತಿಥಿಯಾಗಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ಲಕ್ಷ್ಮೀ ನೆಕ್ಕಿಲ ಭಾಗವಹಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲೀಲಾ ಕುಮಾರಿ ಉಪಸ್ಥಿತರಿದ್ದರು.

ಜೇಸಿಐ ಪಂಜ ಪಂಚಶ್ರೀ ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ, ಕಾರ್ಯಕ್ರಮ ನಿರ್ದೇಶಕ ಸುಬ್ರಹ್ಮಣ್ಯ ಕುದ್ಪಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಾರುಬಂಡಿ ಪ್ರಾಯೋಜಕರಾದ ಜೇಸಿ ದೇವಿಪ್ರಸಾದ್ ಜಾಕೆ ಶ್ರೀಮತಿ ಪೂರ್ಣಿಮಾ ಡಿ.ಪ್ರಸಾದ್. ಮಾಲಕರು ಜಾಕೆ ಫ್ಯಾಷನ್ ಪಂಜ ದಂಪತಿಗಳನ್ನು ಜೇಸಿ ಐ ಪಂಜ ಪಂಚಶ್ರೀ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗಗನ್ ಕಿನ್ನಿಕುಮೇರಿ ಜೇಸಿವಾಣಿ ವಾಚಿಸಿದರು.ವೇದಿಕೆಗೆ ಜೀವನ್ ಶೆಟ್ಟಿಗದ್ದೆ ಆಹ್ವಾನಿಸಿದರು. ಶ್ರೀಮತಿ ಲೀಲಾ ಕುಮಾರಿ
ವಂದಿಸಿದರು.ಕಾರ್ಯಕ್ರಮದಲ್ಲಿ ಜೇಸಿ ಪೂರ್ವಾಧ್ಯಕ್ಷರು ಗಳು ಸದಸ್ಯರುಗಳು ಹಾಗೂ ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದರು.
.