ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದಲ್ಲಿರುವ ಚೊಕ್ಕಾಡಿ ಪ್ರೌಢಶಾಲೆಗೆ ಆ.15 ರಂದು 50 ವರ್ಷ ತುಂಬಿದ್ದು ಸುವರ್ಣ ಮಹೋತ್ಸವ ಆಚರಿಸುವ ಸಲುವಾಗಿ ಪೂರ್ವಭಾವಿ ಸಭೆಯು ಶಾಲೆಯ ಸಭಾಭವನದಲ್ಲಿ ನಡೆಯಿತು.
















ಶಾಲೆಯ
ಆಡಳಿತ ಮಂಡಳಿಯ ಅಧ್ಯಕ್ಷ, ಮಾಜಿ ಸಚಿವರು ಎಸ್. ಅಂಗಾರ ರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ”ಊರ ಹಿರಿಯರು ಕಟ್ಟಿ ಬೆಳೆಸಿದ ಶಾಲೆಯನ್ನು ಉಳಿಸಿ ಬೆಳೆಸುವ ಮಹತ್ತರ ಜವಬ್ದಾರಿ ನಮ್ಮ ಮೇಲಿದೆ. 50 ವರ್ಷ ತುಂಬಿದ ಸುವರ್ಣ ಸಂಭ್ರಮವನ್ನು ಎಲ್ಲಾ ವಿದ್ಯಾಭಿಮಾನಿಗಳು ಒಟ್ಟಾಗಿ ಸೇರಿ ಅವಿಸ್ಮರಣೀಯವಾಗಿ ಆಚರಿಸುವಂತಾಗಬೇಕು ಎಂದು ಕರೆ ನೀಡಿದರು.
ಶಾಲಾ ಸಂಚಾಲಕ ರಾಧಾಕೃಷ್ಣ ಬೊಳ್ಳೂರು, ಆಡಳಿತ ಮಂಡಳಿ ಉಪಾಧ್ಯಕ್ಷ ಅಣ್ಣಾಜಿ ಗೌಡ ಪೈಲೂರು, ಕಾರ್ಯದರ್ಶಿ ತೇಜಸ್ವಿ ಕಡಪಳ, ಖಜಾಂಜಿ ಹರ್ಷವರ್ಧನ ಬೊಳ್ಳೂರು, ನಿರ್ದೇಶಕ ಆನಂದ ಚಿಲ್ಪಾರು, ಪ್ರೌಢಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಮೂಕಮಲೆ, ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ ಮಾಯಿಪಡ್ಕ, ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ಚೈತ್ರಾ .ಯು, ಹಿರಿಯ ಶಿಕ್ಷಕಿ ಸಂಧ್ಯಾಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕ ಎಂ.ಟಿ. ಶಾಂತಿಮೂಲೆ,
ಆಡಳಿತ ಮಂಡಳಿ ನಿರ್ದೇಶಕರುಗಳಾದ ಅರುಣ್ ಕುಮಾರ್ ನಾಯರ್ ಕಲ್ಲು, ವೆಂಕಟ್ರಮಣ ಇಟ್ಟಿಗುಂಡಿ, ಭಾಸ್ಕರ ಮೇರ್ಕಜೆ, ಜಗನ್ನಾಥ ಹಿರಿಯಡ್ಕ, ಸನತ್ ದೇರಾಜೆ, ಸತ್ಯಪ್ರಸಾದ್ ಪುಳಿಮಾರಡ್ಕ, ಮುಖ್ಯೋಪಾಧ್ಯಾಯರಾದ ಸಂಕೀರ್ಣ ಚೊಕ್ಕಾಡಿ, ಶಿಕ್ಷಕ ವೃಂದದವರು ಮತ್ತು ಸಿಬ್ಬಂದಿ ವರ್ಗದವರು, ವಿದ್ಯಾಭಿಮಾನಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವದ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.









