ಗೃಹ ಜ್ಯೋತಿ ಉಚಿತ ವಿದ್ಯುತ್‌ ಹಾಗೂ ಅನ್ನ ಭಾಗ್ಯದ ಹೆಚ್ಚುವರಿ ಅಕ್ಕಿಯ ಹಣ ಕೆಲವರಿಗೆ ಉಂಟು ಕೆಲವರಿಗೆ ಇಲ್ಲ, ಸರಕಾರ ಜನರ ಗೊಂದಲ ಸರಿಪಡಿಸಲಿ : ಆಮ್ ಆದ್ಮಿ ಪಾರ್ಟಿ

0

ಸರಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಸ್ವಾಗತಾರ್ಹ. ಆದರೆ ಅನುಷ್ಠಾನದ ಸಂದರ್ಭದಲ್ಲಿ ಕೆಲವೊಂದು ಷರತ್ತುಗಳು ಕೊನೆಯ ಸಮಯದಲ್ಲಿ ಅಳವಡಿಸಿದ್ದರಿಂದ ಷರತ್ತು ಅನ್ವಯಕ್ಕೆ ಒಳಪಟ್ಟು ಸಿಂಧುವಾದ ಅರ್ಜಿಯನ್ನು ಸಲ್ಲಿಸಿದರೂ ಅನೇಕ ಅರ್ಜಿದಾರರಿಗೆ
ಗೃಹ ಜ್ಯೋತಿಯ ಉಚಿತ ಭಾಗ್ಯ ದೊರೆತಿಲ್ಲ, ಸಂಬಂಧಪಟ್ಟ ಇಲಾಖೆಯಲ್ಲಿ ಮಾಹಿತಿ ಕೇಳಿದರೆ ಸರಿಯಾದ ಉತ್ತರ ಲಭಿಸದೆ ಜನರು ಗೊಂದಲಕ್ಕೀಡಾಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಮುಖಂಡ ರಶೀದ್ ಜಟ್ಟಿಪಳ್ಳ ಹೇಳಿದ್ದಾರೆ.

ಅನ್ನ ಭಾಗ್ಯದ ಹೆಚ್ಚುವರಿ ಅಕ್ಕಿಯ ನಗದು ಕೆಲವರಿಗೆ ಖಾತೆಯಲ್ಲಿ ಜಮಾ ಆದರೆ ಅನೇಕರಿಗೆ ಇನ್ನೂ ವಿವಿಧ ಕಾರಣದಿಂದ ಜಮಾ ಆಗಿಲ್ಲ. ಕೆಲವಡೆ NPCI ನೋಂದಣಿ ಆಗದೆ ಕೆಲವೊಂದು ಕಡೆ ಖಾತೆ ಸಮರ್ಪಕ ವಾಗಿಲ್ಲ. ಕೆಲವೊಂದು ಕಡೆ ಪಡಿತರ ಚೀಟಿಯಲ್ಲಿ ಎಲ್ಲವೂ ಸರಿ ಇದ್ದರೂ ನಗದು ಪಾವತಿ ತಡೆಹಿಡಿಯಲ್ಪಟ್ಟಿದೆ. ಈಗ ಜನರು ತಾಲೂಕಿನಿಂದ ಸೇವಾ ಕೇಂದ್ರಕ್ಕೆ ಸೇವಾ ಕೇಂದ್ರದಿಂದ ಬ್ಯಾಂಕ್ – ಬ್ಯಾಂಕ್ ನಿಂದ ಸೊಸೈಟಿ ಹೀಗೆ ಅಲೆಯುವ ಪರಿಸ್ಥಿತಿ ಬಂದಿದೆ.


ಸರಕಾರ ಜನಕಲ್ಯಾಣ ಯೋಜನೆ ತರುವಾಗ ಅನುಷ್ಠಾನ ಸಹ ಸರಿಯಾದ ರೀತಿಯಲ್ಲಿ ಆಗಬೇಕು. ಈಗ ಜನರಿಗೆ ಆದ ಗೊಂದಲವನ್ನು ಸರಕಾರ ತಿಳಿದು ಜನರಿಗೆ ಯೋಜನೆಗಳ ಸವಲತ್ತುಗಳು ಸರಳವಾಗಿ ದೊರೆಯುವಂತೆ ಆಗಬೇಕು. ಇದಕ್ಕೆ ಇಲ್ಲಿನ ಶಾಸಕರು
ಪಕ್ಷ ಭೇದ ಮರೆತು ಗಮನಹರಿಸಬೇಕು. ಸರಕಾರ ಕೂಡಲೆ ಇಲಾಖೆಗಳಿಗೆ ಮಾಹಿತಿ ನೀಡಿ ಜನರಿಗೆ ಆದ ಗೊಂದಲ
ಸರಿಪಡಿಸಿ ಬಡಜನರು ಸರಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲ ಮಾಡಿಕೊಡಬೇಕೆಂದು
ಆಮ್ ಅದ್ಮಿ ಪಕ್ಷ ಒತ್ತಾಯ ಮಾಡುತ್ತದೆ ಎಂದು ರಶೀದ್ ಜಟ್ಟಿಪಳ್ಳ ಒತ್ತಾಯಿಸಿದ್ದಾರೆ.