ಸುಳ್ಯ ರೋಟರಿಯಿಂದ ವಿನೂತನ ಕಾರ್ಯಕ್ರಮ ರೋಟರಿ ನಡೆ ಅರಣ್ಯ ಕಡೆ

0

ರಸ್ತೆ ಬದಿ ಗಿಡ ನೆಡುವ ಮೂಲಕ‌ ಯೋಜನೆಗೆ ಚಾಲನೆ

ರೋಟರಿ ಕ್ಲಬ್ ಸುಳ್ಯ ಸಿಟಿ, ರೋಟರಿ ಕ್ಲಬ್ ಸುಳ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಜಂಟಿಯಾಗಿ ಆ.20 ರಂದು ಪರಿಸರ ಸಂರಕ್ಷಣೆಯ ಧ್ಯೇಯದೊಂದಿಗೆ ರೋಟರಿ ನಡೆ ಅರಣ್ಯ ಕಡೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾರ್ಕೋಡು ತಿರುವಿನಲ್ಲಿ ಸುಳ್ಯ ರೇಂಜ್ ಫಾರೆಸ್ಟ್ ಆಪೀಸರ್ ರೊ| ಮಂಜುನಾಥರವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಂದೆ ಅಜ್ಜಾವರದಿಂದ ನಾರ್ಕೋಡು ತನಕ ರಸ್ತೆಯ ಬದಿ ಹಣ್ಣಿನ ಗಿಡಗಳನ್ನು ನೆಡುವ ಹಾಗೂ ಬೀಜಗಳನ್ನು ಬಿತ್ತುವ ಮೂಲಕ ಪಾದಯಾತ್ರೆಯಲ್ಲಿ ಸಾಗಲಾಯಿತು.

ಫಾರೆಸ್ಟ್ ಆಫೀಸರ್ ಗಳಾದ ವೆಂಕಟೇಶ್, ಯಶೋಧರ, ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ರೊ|ಗಿರೀಶ್ ನಾರ್ಕೋಡು, ರೋಟರಿ ಕ್ಲಬ್ ಸುಳ್ಯ ಅಧ್ಯಕ್ಷ ರೊ|ಆನಂದ ಖಂಡಿಗ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಅಧ್ಯಕ್ಷ ರೊ|ಪ್ರಶಾಂತ್ ಕೋಡಿಬೈಲು ಹಾಗೂ ಜಂಟಿ ಸಂಸ್ಥೆಗಳ ರೋಟರಿ ಸದಸ್ಯರುಗಳು ಪಾಲ್ಗೊಂಡಿದ್ದರು.