ಸೌತ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚೇತನ್ ಮುಂಡೋಡಿ ಪ್ರಥಮ

0

ಇತ್ತೀಚೆಗೆ ಚೆನೈನಲ್ಲಿ ನಡೆದ ಸೌತ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚೇತನ್ ಮುಂಡೋಡಿ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಇವರು ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಉದ್ಯಮಿ ಉಮೇಶ್ ಮುಂಡೋಡಿ ಮತ್ತು ಮೀನಾಕ್ಷಿ ಮುಂಡೋಡಿ ಅವರ ಪುತ್ರ, ಪ್ರಸ್ತುತ ಜ್ಞಾನ ದೀಪ ವಿದ್ಯಾಸಂಸ್ಥೆ ಎಲಿಮಲೆ ಇಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

ಇವರು ಕರಾಟೆ ಗುರುಗಳಾದ ನಾರಾಯಣ ಪುತ್ತೂರು ಇವರ ಮಾರ್ಗದರ್ಶನದಲ್ಲಿ ಕರಾಟೆ ತರಬೇತಿ ಪಡೆದಿರುತ್ತಾರೆ.