ಸುಳ್ಯ ಅಂಬಟೆಡ್ಕ ಬ್ರಹ್ಮಕುಮಾರೀಸ್ ಧ್ಯಾನ ಮಂದಿರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

0

ಸಮಾಜದಲ್ಲಿ ಉತ್ತಮ ಕಾರ್ಯ ಮಾಡುವ ಪ್ರತಿಜ್ಞೆಯಿಂದ ಸಹೋದರತೆಯ ರಕ್ಷೆ ಕಟ್ಟಿಸಿಕೊಂಡು ಪರಮಾತ್ಮನ ರಕ್ಷಣೆ ಪಡೆಯಿರಿ: ಬ್ರಹ್ಮಕುಮಾರಿ ಲೀಲಾ ದಾವಣಗೆರೆ

ಸುಳ್ಯದ ಅಂಬಟೆಡ್ಕ ದಲ್ಲಿರುವ ಬ್ರಹ್ಮಕುಮಾರೀಸ್ ಈಶ್ವರೀಯ ಧ್ಯಾನ ಕೇಂದ್ರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಆ.23 ರಂದು ನಡೆಯಿತು. ಹಿರಿಯಬ್ರಹ್ಮಕುಮಾರಿ ಲೀಲಾ ದಾವಣೆಗೆರೆ ಯವರು ಮಾತನಾಡಿ
“ಸಂಕಷ್ಟದ ಸಮಯದಲ್ಲಿ ಪರಮಾತ್ಮನು ಗೋಚರಿಸಿ ರಕ್ಷಣೆ ನೀಡುವ ಸಮಯ ಹಾಗೂ ಕಾಮ, ಕ್ರೋಧ, ಮೋಹ, ಲೋಭ, ಅಹಂಕಾರ ಎಂಬ ಐದು ಅಂಶಗಳನ್ನು ತ್ಯಜಿಸುವ ಕುರಿತು ಪ್ರತಿಜ್ಞೆ ಮಾಡಿ ರಕ್ಷೆ ಕಟ್ಟಿದಾಗ ಪರಮಾತ್ಮನು ಅವತರಿಸಿ ರಕ್ಷಿಸುತ್ತಾನೆ. ಸಹೋದರತೆಯ ಸಂಕೇತವಾಗಿರುವ
ರಕ್ಷಾ ಬಂಧನದ ಮಹತ್ವದ ಸಂದೇಶವನ್ನು ಸಾರಿದರು. ಧ್ಯಾನ ಕೇಂದ್ರದ ಬ್ರಹ್ಮಕುಮಾರಿ ಉಮಾ ರವರು ಸ್ವಾಗತಿಸಿದರು.


ಈ ಸಂದರ್ಭದಲ್ಲಿ ಮಹಿಳಾ ಸಮಾಜದ ಸದಸ್ಯರು, ಇನ್ನರ್ ವೀಲ್ ಕ್ಲಬ್ ಸದಸ್ಯರು, ಮಹಿಳೆಯರು, ಪುರುಷರು, ಮಕ್ಕಳು ಭಾಗವಹಿಸಿದರು. ಆಗಮಿಸಿದ ಎಲ್ಲರ ಕೈಗೆ ಸಹೋದರತ್ವದ ಸಂಕೇತವಾಗಿರುವ ರಕ್ಷೆಯನ್ನು ಕಟ್ಟಲಾಯಿತು. ಮಧ್ಯಾಹ್ನ ಆಗಮಿಸಿದ ಎಲ್ಲರಿಗೂ ಬ್ರಹ್ಮ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಧ್ಯಾನ ಕೇಂದ್ರದ ಸದಸ್ಯರು ಸಹಕರಿಸಿದರು. ಜ್ಯೋತಿಷ್ಯ ಭೀಮರಾವ್ ವಾಷ್ಢರ್ ಮತ್ತು ಬಳಗದವರಿಂದ ಭಕ್ತಿ ಗೀತಾ ಗಾಯನ ಕಾರ್ಯಕ್ರಮ ನಡೆಯಿತು.