ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಸ್ವರ್ಣ ಸಂಭ್ರಮದ ಪ್ರಯುಕ್ತ ಕ್ರಿಕೆಟ್ ಪಂದ್ಯಾಟ

0

ಸುಳ್ಯದ ಪಯಸ್ವಿ‌ನಿ ಟೂರಿಸ್ಟ್ ಚಾಲಕ ಮಾಲಕ ಸಂಘಕ್ಕೆ ರನ್ನರಫ್ ಪ್ರಶಸ್ತಿ

ದ. ಕ ಜಿಲ್ಲಾ ಟ್ಯಾಕ್ಸಿ ಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ (ರಿ ) ಇದರ ಸ್ವರ್ಣಸಂಭ್ರಮ ದ ಪ್ರಯುಕ್ತ ಮಂಗಳೂರಿನಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಪಯಸ್ವಿನಿ ಟೂರಿಸ್ಟ್ ಚಾ. ಮಾ ಸಂಘ ಸುಳ್ಯ ಮತ್ತು ನೆಟ್ಟಣ ರೈಲ್ವೆ ಪಾರ್ಕಿಂಗ್ ಸದಸ್ಯರು ಜಂಟಿಯಾಗಿ ಭಾಗವಹಿಸಿ ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ಈ ಪಂದ್ಯಕೂಟದಲ್ಲಿ ಸುಳ್ಯದಿಂದ 8 ಮಂದಿ ಪ್ರತಿನಿಧಿಸಿದ್ದರು, ರಾಕೇಶ್ ಕ್ರಾಸ್ತ, ದಾಮೋದರ ಅಡ್ಕಾರು, ರಾಜೇಶ್ ಅಡ್ಕಾರು, ರವಿರಾಜ ಅಡ್ಕಾರು, ಜಯಂತ ಹರ್ಲಡ್ಕ,ಸುರೇಶ್ ಕಂದಡ್ಕ, ವಿಜಯಾನಂದ , ಚೇತನ್ ಸುಳ್ಯ . ಈ ಪಂದ್ಯಾಟದಲ್ಲಿ ರಾಕೇಶ್ ಕ್ರಾಸ್ತಾ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ