ಚಂದ್ರಯಾನ 3 ರ ಸಾಧಕಿ ಮಾನಸ ಜಯಕುಮಾರ್ ರಿಗೆ ಸಹ ಪಾಠಿಗಳಿಂದ ಅಭಿನಂದನೆ

0

ಇಸ್ರೋ ಸಂಸ್ಥೆಯ ಚಂದ್ರಯಾನ -3ರಲ್ಲಿ ಕಾರ್ಯನಿರ್ವಹಿಸಿದ ಶ್ರೀಮತಿ ಮಾನಸ ಜಯಕುಮಾರ್ ರವರ ಮನೆಗೆ ತೆರಳಿ ಅವರ ವಿದ್ಯಾರ್ಥಿ ಜೀವನದ ಸಹಪಾಠಿಗಳು ಅಭಿನಂದನೆ ಸಲ್ಲಿಸಿದರು.
ಸುಳ್ಯಸರಕಾರಿ ಪದವಿ ಪೂರ್ವ ಕಾಲೇಜಿನ 2008-2009 ನೇ ಸಾಲಿನ ವಿಜ್ಞಾನ ವಿಭಾಗದ ಸಹಪಾಠಿಗಳು ಮಾನಸ ರವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿದರು.

ಈ ಸಂದರ್ಭ ವಿದ್ಯಾರ್ಥಿ ಜೀವನದ ನೆನಪುಗಳು ಹಾಗೂ ಚಂದ್ರಯಾನ -3 ಸಂಶೋಧನಾ ಕೇಂದ್ರದಲ್ಲಿ ಪಡೆದ ಅನುಭವವನ್ನು ಸಹಪಾಠಿಗಳೊಂದಿಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ
ಸಹಪಾಠಿಗಳಾದ ಅಜಿತ್ ಕಿರ್ಲಾಯ, ಪ್ರಣೀತ್ ಕಣಕ್ಕೂರು,ವಿನೋದ್ ಕೊಯಿಂಗಾಜೆ,ಪ್ರದೀಪ್ ಉಬರಡ್ಕ,ಹೇಮನಾಥ ಜಯನಗರ ಉಪಸ್ಥಿತರಿದ್ದರು.