ಕರ್ನಾಟಕ ಸರಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಅನುಷ್ಠಾನ ಕಾರ್ಯಕ್ರಮ ಇಂದು ರಾಜ್ಯದಾದ್ಯಂತ ಅನುಷ್ಠಾನಗೊಳ್ಳಲಿರುವ ಹಿನ್ನೆಲೆಯಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾ ಪಂ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಪ್ರೋಜೆಕ್ಟರ್ ಮುಖಾಂತರ ನೋಡುವ ವ್ಯವಸ್ಥೆ ಮಾಡಲಾಗಿತ್ತು.
ಗ್ರಾ.ಪಂ ಆವರಣದಲ್ಲಿ ರಂಗೋಲಿ ರಚಿಸಿ ಪಲಾನುಭವಿಗಳನ್ನು ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅದ್ಯಕ್ಷ ವಿಜಯ ಕುಮಾರ್ ಅಂಙಣ, ಉಪಾಧ್ಯಕ್ಷ ಜಯಂತ ಬಾಳುಗೋಡು, ಸದಸ್ಯರು ಗಳಾದ ದಿವಾಕರ ಮುಂಡಾಜೆ,ಬಿಂದು ಗುಂಡಿಹಿತ್ಲು ಪದ್ಮಾವತಿ ಕಲ್ಲೇಮಠ, ಶಿಲ್ಪಾ ಕೊತ್ನಡ್ಕ, ಪಿಡಿಒ ಮಣಿಯಾನ ಮನೆ ಪುರುಷೋತ್ತಮ,
ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು, ಆಶಾ ಕಾರ್ಯಕರ್ತೆ ಯರು ಅಂಗನವಾಡಿ ಕಾರ್ಯಕರ್ತೇಯರು ಉಪಸ್ಥಿತರಿದ್ದರು. ನೂರಾರು ಮಂದಿ ಫಲಾನುಭವಿಗಳು,ಊರವರು ಉಪಸ್ಥಿತರಿದ್ದರು.
ವರದಿ: ಕುಶಾಲಪ್ಪ ಕಾಂತುಕುಮೇರಿ