ಆಲೆಟ್ಟಿ ಪಂಚಾಯತ್ ನಲ್ಲಿ ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಗೆ ಪಂಚಾಯತ್ ಅಧ್ಯಕ್ಷರಿಂದ ಚಾಲನೆ

0

ರಾಜ್ಯ ಸರಕಾರದ ಅತ್ಯುತ್ತಮ ಯೋಜನೆ ಇದಾಗಿದೆ. ಒಬ್ಬ ಮಹಿಳೆಗೆ 2 ಸಾವಿರ ಸ್ವಾವಲಂಬಿ ಬದುಕಿಗೆಪೂರಕವಾಗಲಿದೆ.ಎಲ್ಲಾ ಮಹಿಳೆಯರಿಗೆ ಲಭಿಸುವಂತಾಗಲಿ- ಶ್ರೀಪತಿ ಭಟ್ ಮಜಿಗುಂಡಿ

ರಾಜ್ಯ ಸರಕಾರದ ಮಹಾತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಅನುಷ್ಠಾನ ಕಾರ್ಯಕ್ರಮವು ಆಲೆಟ್ಟಿ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆಯಿತು.

ಈ ಸಂದರ್ಭದಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾಕುಮಾರಿ ಆಲೆಟ್ಟಿ ಯವರು ದೀಪ ಬೆಳಗಿಸಿ ಚಾಲನೆ ನೀಡಿದರು. ನೊಡೆಲ್ ಅಧಿಕಾರಿಯಾಗಿ
ಹಿಂದುಳಿದ ವರ್ಗಗಳ

ಕಲ್ಯಾಣಾಧಿಕಾರಿ ಗೀತಾ, ಬ್ಯಾಂಕಿಂಗ್ ಆಪ್ತ ಸಮಾಲೋಚಕಿ ಸುಜಾತ ರವರು ಬ್ಯಾಂಕಿಂಗ್ ಕುರಿತು ಮಾಹಿತಿ ನೀಡಿದರು.
ಗ್ರಾ.ಪಂ. ಉಪಾಧ್ಯಕ್ಷೆ ಕೆ.ಕಮಲ ನಾಗಪಟ್ಟಣ, ಪ್ರಭಾರ ಪಿ.ಡಿ.ಒ ಸೃಜನ್ ಎ.ಜಿ, ಸದಸ್ಯರಾದ ಗೀತಾ ಕೋಲ್ಚಾರು, ಮೀನಾಕ್ಷಿ ಕುಡೆಕಲ್ಲು, ಸತ್ಯಕುಮಾರ್ ಆಡಿಂಜ, ಧರ್ಮಪಾಲ ಕೊಯಿಂಗಾಜೆ, ಚಂದ್ರಕಾಂತ ನಾರ್ಕೋಡು, ಸತ್ಯಪ್ರಸಾದ್ ಗಬ್ಬಲ್ಕಜೆ,

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ,
ಮಾಜಿ ಅಧ್ಯಕ್ಷ ರಾಧಾಕೃಷ್ಣ ಪರಿವಾರಕಾನ, ಬಾಪೂ ಸಾಹೇಬ್, ದೇವಪ್ಪ ನಾಯ್ಕ ಕೂರ್ನಡ್ಕ ಉಪಸ್ಥಿತರಿದ್ದರು.

ಗ್ರಾಮದ ಮಹಿಳಾ ಫಲಾನುಭವಿಗಳು, ಅಂಗನವಾಡಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಚಂದ್ರಕಾಂತ ನಾರ್ಕೋಡು ಸ್ವಾಗತಿಸಿದರು. ಧರ್ಮಪಾಲ ಕೊಯಿಂಗಾಜೆ ವಂದಿಸಿದರು. ಪಂ.ಸಿಬ್ಬಂದಿಯವರು ಸಹಕರಿಸಿದರು.