ಎಸ್ ಎಂ ಎ ಜಿಲ್ಲಾ ಸಮಿತಿ ಉಪಾಧ್ಯಕ್ಷರಾಗಿ ಲತೀಫ್ ಹರ್ಲಡ್ಕ ಹಾಗೂ ಲತೀಫ್ ಸಖಾಫಿ ಆಯ್ಕೆ

0

ಸುನ್ನೀ ಮಾನೇಜ್ ಮೆಂಟ್ ಅಸೋಸಿಯೇಷನ್ ಎಸ್ ಎಂ ಎ ದ. ಕ ಜಿಲ್ಲಾ ಈಸ್ಟ್ ಸಮಿತಿಯ ನೂತನ ಉಪಾಧ್ಯಕ್ಷರುಗಳಾಗಿ ಲತೀಫ್ ಹರ್ಲಡ್ಕ,ಹಾಗೂ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಆಯ್ಕೆಯಾಗಿರುತ್ತಾರೆ.

ಎಸ್ ಎಂ ಎ ಸುಳ್ಯ ರೀಜ್ಯನಲ್ ಕೋಶಾಧಿಕಾರಿಗಳಾದ ಲತೀಫ್ ಹರ್ಲಡ್ಕರವರು ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ಸುಳ್ಯ ಪ್ರಧಾನ ಕಾರ್ಯದರ್ಶಿ,ನುಸ್ರತ್ ಎಲಿಮಲೆ ಅಧ್ಯಕ್ಷ ಮುಂತಾದ ಹಲವು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ದಾರೆ.

ಎಸ್ ಎಂ ಎ ಸುಳ್ಯ ರೀಜ್ಯನಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕರವರು ಬದ್ರಿಯಾ ಜುಮಾ ಮಸೀದಿ ಗೂನಡ್ಕ ಸಮಿತಿಯ ಕೋಶಾಧಿಕಾರಿಗಳು ,ಮದ್ರಸ ಅಧ್ಯಾಪಕ ಒಕ್ಕೂಟದ ಪದಾಧಿಕಾರಿ ಹಾಗೂ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ