ಸಂಪಾಜೆ: ವಿಶೇಷ ಚೇತನರ ಸ್ವಸಹಾಯ ಸಂಘ ರಚನೆ

0

ಸಂಪಾಜೆ ಗ್ರಾಮದ ಸಂಜೀವಿನಿ ಕಟ್ಟಡದಲ್ಲಿ ವಿಶೇಷ ಚೇತನರ ಸ್ವಸಹಾಯ ಸಂಘವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಅವರು ಸೆ.1ರಂದು ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಎಸ್. ಕೆ. ಹನೀಫ್ ಕಲ್ಲುಗುಂಡಿ, ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಸಂಜೀವಿನಿ ಒಕ್ಕೂಟದ ಕಾಂತಿ ಬಿ. ಎಸ್. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಹರ್ಷಿತ್, ಉಪಸ್ಥಿತರಿದ್ದರು.
ವಿಶೇಷ ಚೇತನ ಸ್ವಸಹಾಯ ಸಂಘದ ಅಧ್ಯಕ್ಷರಾಗಿ ಪದ್ಮನಾಭ ಪೂಜಾರಿ ಕಾರ್ಯದರ್ಶಿಯಾಗಿ ಚಂದ್ರಾವತಿ ದಂಡೆಕಜೆ ಸದಸ್ಯರಾಗಿ ಗೋಪಾಲ ಮೂಸಾನ್, ಗುಡ್ಡಪ್ಪ , ಸುನಿಲ್ ಪೆರಂಗೋಡಿ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.