ನೆಲ್ಲೂರು ಕೆಮ್ರಾಜೆ ಪ್ರಾಥಮಿ ಕೃಷಿ ಪತ್ತಿನ ಸಹಕಾರದ ಮಹಾಸಭೆ

0

ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಣೆ

ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ‌ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯು ಸೆ.3ರಂದು ಸೊಸೈಟಿ ಸಭಾಂಗಣದಲ್ಲಿ ನಡೆಯಿತು. ‌ ಸಹಕಾರ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಕಾರ್ಯನಿರ್ವಣಾಧಿಕಾರಿ ಸಂತೋಷ್ ನಾಯಕ್‌ ಎನ್.‌ ವರದಿ‌ ಮಂಡಿಸಿದರು.
ಬಳಿಕ ವರದಿಯ ಮೇಲೆ‌ ಚರ್ಚೆ ನಡೆದು‌ ಅನುಮೋದನೆ ಪಡೆಯಲಾಯಿತು‌.

ಪ್ರಸಕ್ತ ವರ್ಷದಲ್ಲಿ ಸಂಘವು ರೂ. 44,19,882 ರಷ್ಟು ಲಾಭವನ್ನು ಹೊಂದಿದ್ದು, ಉಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷರಾದ ವಿಷ್ಣು ಭಟ್‌ ಮೂಲೆತೋಟರವರು ಘೋಷಿಸಿದರು

.

ಸಂಘವು ಸದಸ್ಯರಿಗೆ ವಿವಿಧ ಬಗೆಯ ಸಾಲವಾಗಿ 23,92,63,900 ರೂ.‌ನೀಡಲಾಗಿದೆ. ನಾವು ಜನರ ಬ್ಯಾಂಕಿಂಗ್ ಅವಶ್ಯಕತೆಗಳನ್ನು ಪೂರೈಸುವ ದೃಷ್ಠಿಯಿಂದ ಠೇವಣಾತಿ ಸ್ವೀಕಾರದ ಜೊತೆಗೆ ಕೃಷಿಯೇತರ ಸಾಲ ವಿತರಣೆ, ಸದಸ್ಯರುಗಳಿಗೆ ಸೇಫ್ ಲಾಕರ್ ವ್ಯವಸ್ಥೆ, ನೆಪ್ಟ್ ಸೌಲಭ್ಯ ಇತ್ಯಾದಿ ವ್ಯವಹಾರಗಳನ್ನು ಮಾಡುತ್ತಿದ್ದೇವೆ. ಸದಸ್ಯರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ನಾವು ಕ್ಯಾಂಪ್ಕೋದ ಸಹಯೋಗದೊಂದಿಗೆ ವಾರದ ಮಂಗಳವಾರದಂದು ಕೊಕ್ಕೋ ಖರೀದಿ ವ್ಯವಸ್ಥೆ, ಶುಕ್ರವಾರದಂದು ಅಡಿಕೆ ಖರೀದಿ ಮತ್ತು ವಾರದ ಕಛೇರಿ ಇರುವ ದಿನಗಳಲ್ಲಿ ರಬ್ಬರ್ ಖರೀದಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೇ ಸಂಘದ ಗೋದಾಮಿನಲ್ಲಿ ಕೃಷಿ ಉತ್ಪನ್ನಗಳನ್ನು ಇರಿಸಿ ಅದಕ್ಕೆ ಸಾಲವನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಾಡಿಗೆ ನೆಲೆಯಲ್ಲಿ ಕಾಳು ಮೆಣಸು ಬೇರ್ಪಡಿಸುವ ಯಂತ್ರ, ಪಹಣಿ ಪತ್ರ ತೆಗೆದುಕೊಡುವ ಸೌಲಭ್ಯ, ಜೆರಾಕ್ಸ್ ವ್ಯವಸ್ಥೆ, ಕೊಂಕಣ್ ಗ್ಯಾಸ್ ವಿತರಣೆ ಇತ್ಯಾದಿ ವ್ಯವಹಾರವನ್ನು ಸದಸ್ಯರಿಗೆ ಕಲ್ಪಿಸಲಾಗಿದೆ‌. ಅಲ್ಲದೇ ಹವಾಮಾನ ಆಧಾರಿತ ಬೆಳೆ‌ವಿಮಾ ಯೋಜನೆ, ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಸಂಘ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ‌ ಬೆಳ್ಳಿ ಹಬ್ಬದ ಸವಿನೆನಪಿಗೆ ವಿವಿಧ ಕಾರ್ಯಕ್ರಮ ಗಳನ್ನು‌ ಹಮ್ಮಿಕೊಂಡು‌ ಸಹಕಾರ ಸಪ್ತಾಹದೊಂದಿಗೆ‌ ಆಚರಿಸಲಿದ್ದೇವೆ. ನಮ್ಮ ಎಲ್ಲಾ ಸದಸ್ಯರ ಸಹಕಾರದ ನಿರೀಕ್ಷೆಯನ್ನು ಕೋರುತ್ತೇವೆ ಎಂದು ಸಂಘದ ಅಧ್ಯಕ್ಷರಾದ ವಿಷ್ಣು ಭಟ್ ರವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ‌ ಹೇಳಿದರು.

ವೇದಿಕೆಯಲ್ಲಿ ನಿರ್ದೇಶಕ ರಾದ ದೇವಿಪ್ರಸಾದ್ ಸುಳ್ಳಿ, ಶುಭಾಕರ ನಾಯಕ್ ಬೊಳ್ಳಾಜೆ, ಮಾಧವ ಗೌಡ ಸುಳ್ಳಿ, ಸತ್ಯೇಶ್ ಕುಮಾರ್ ಚಂದ್ರೋಡಿ, ಉಮೇಶ ಪ್ರಭು ಕೆ., ಶ್ರೀಮತಿ ಇಂದಿರಾ, ಶ್ರೀಮತಿ ಸಂಧ್ಯಾ ಎ.ಎಲ್., ತೀರ್ಥಕುಮಾರ್ ಟಿ., ಹರೀಶ ಸುಳ್ಳಿ, ಹರೀಶ ಕೆ., ಚೇತನ ಅತ್ತಿಮರಡ್ಕ, ಚಂದ್ರ ದಾಸನಕಹೆ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಜಯಪ್ರಸಾದ್ ಸುಳ್ಳಿ ವಂದಿಸಿದರು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಉನ್ನತ ಮಟ್ಟದ ಶಿಕ್ಷಣದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಹಾಗೂ ನಿವೃತ್ತ ಶಿಕ್ಷಕರು, ಹಿರಿಯ‌ 4 ಮಂದಿ ಸದಸ್ಯರನ್ನು‌ ಹಾಗೂ ನಿವೃತ್ತ ಗೊಂಡ ಸಿಬ್ಬಂದಿ ಚನಿಯಪ್ಪ ದಂಪತಿಗಳನ್ನು ಸನ್ಮಾನಿಸಲಾಯಿತು. ಉತ್ತಮ ಕಾರ್ಯ ಮಾಡಿದ ನವೋದಯ ಸಂಘವನ್ನು ಗುರುತಿಸಲಾಯಿತು.