ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ನಲ್ಲಿ ಮೋಂತಿ ಹಬ್ಬ ಆಚರಣೆ

0

ಸುಳ್ಯ ಸೈಂಟ್ ಬ್ರಿಜಿದ್ ಚರ್ಚಿನಲ್ಲಿ ಸಂಭ್ರಮದ ಮೋಂತಿ ಹಬ್ಬವನ್ನು ಪ್ರಧಾನ ಯಾಜಕರಾಗಿ ಬಾಲಯೇಸು ಪುಣ್ಯಕ್ಷೇತ್ರ ಬಿಕರ್ಣಕಟ್ಟೆ ಮಂಗಳೂರು ಬಾಲಯೇಸು ಪುಣ್ಯ ಕ್ಷೇತ್ರದ ವಂ ವಿಲ್ಸನ್ ಪೀಟರ್ ತಾವುರೊ ಪ್ರಾರ್ಥಿಸಿದರು.


ಬಲಿಪೂಜೆಯನ್ನು ಸಹಯಾಜಕರಾದ ವಂ.ವಿಲ್ಸನ್ ಓಸ್ವಾಲ್ಡ್ ಲಸ್ರಾದೊ ಹಾಗೂ ವಂ. ವಿಕ್ಟರ್ ಡಿ ಸೋಜ ರವರು ಅರ್ಪಿಸಿದರು.
ಬಲಿಪೂಜೆಯ ಮೊದಲು ಮಾತೆ ಮರಿಯಾಳ ಗ್ರೊಟ್ಟೊದ ಎದುರು ಹೊಸ ತೆನೆಯ ನ್ನು ಸುಳ್ಯ ಚರ್ಚ್ ನ ಧರ್ಮ ಗುರುಗಳಾದ ಪಾ.ವಿಕ್ಟರ್ ಡಿ ಸೋಜ ರವರು ಆಶೀರ್ವದಿಸಿದರು.

.

ನಂತರ ಮಕ್ಕಳು ಹಾಗು ಹಿರಿಯರು ಹೂವುಗಳನ್ನು ಅರ್ಪಿಸಿ ಮೆರವಣಿಗೆಯ ಮೂಲಕ ಬಾಲ ಮರಿಯಾಳನ್ನು, ಹೊಸತೆನೆಯನ್ನು ಚರ್ಚ್ ಒಳಗೆ ಕೊಂಡೊಯ್ದು ಭಕ್ತವೃಂದ ಸಮೂಹದೊಡನೆ ಬಲಿಪೂಜೆಯನ್ನು ಅರ್ಪಿಸಿದರು.

ಕೊನೆಯಲ್ಲಿ ಹೊಸತೆನೆಯನ್ನು ಕುಟುಂಬಗಳಿಗೆ ಹಂಚಲಾಯಿತು.

ಪ್ರಾಯೋಜಕರಿಂದ ಚರ್ಚ್ ಗ್ರೊಟ್ಟೊ, ವೇದಿಕೆಯನ್ನು ಹೂವುಗಳಿಂದ ಶೃಂಗಾರಿಸಲಾಯಿತು.
ಎಲ್ಲಾ ಭಕ್ತಾಧಿಗಳಿಗೆ ಕಬ್ಬು, ಸಿಹಿಪಾನಿಯ ಹಾಗೂ ತಿಂಡಿ ತಿನಿಸುಗಳನ್ನು ವಿತರಿಸಲಾಯಿತು.
ಹಬ್ಬದ ಪ್ರಯುಕ್ತ ವಾಹನಗಳಿಗೆ ಆಶೀರ್ವಾಚನವನ್ನು ನೆರವೇರಿಸಲಾಯಿತು.