ಜಾಲ್ಸೂರು : ಹುಚ್ಚುನಾಯಿ ರೋಗದ ವಿರುದ್ಧ ನಾಯಿಗಳಿಗೆ ಲಸಿಕೆ ಅಭಿಯಾನ

0

ಜಾಲ್ಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ನಾಯಿಗಳಿಗೆ ಹುಚ್ಚುನಾಯಿ ರೋಗದ ವಿರುದ್ದ ಲಸಿಕೆ ಹಾಕಿಸಲಾಯಿತು.

ಜಾಲ್ಸೂರು ಗ್ರಾಮ ಪಂಚಾಯತ್ ಅದ್ಯಕ್ಷೆ ಶ್ರೀಮತಿ ತಿರುವಲೇಶ್ವರಿ ಯವರು ಲಸಿಕೆ ತುಂಬಿದ ಬೋಕ್ಸ್ ನ್ನು ಸುಳ್ಯ ಪಶು ಆಸ್ಪತ್ರೆಯ ಜಾನುವಾರು ಅಭಿವೃದ್ದಿ ಅಧಿಕಾರಿ ಪುಷ್ಪರಾಜ ಶೆಟ್ಟಿ ರವರಿಗೆ ನೀಡುವ ಮೂಲಕ ಲಸಿಕಾ ಕಾರ್ಯಕ್ಕೆ ಜಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಪಂಚಾಯತ್ ಸದಸ್ಯರಗಳು, ಗ್ರಾಮದ ಪಶುಸಖಿ ಮತ್ತು ಪಂಚಾಯತು ಕಾರ್ಯದರ್ಶಿ, ಹಾಜರಿದ್ದರು. ಸುಳ್ಯ ಪಶು ಆಸ್ಪತ್ರೆ ಸಿಬ್ಬಂದಿ ಗಳಾದ ನವೀನ್ ಹಾಗೂ ಹರೀಶ ಸಹಕರಿಸಿದರು.