ಪೆರುವಾಜೆ ಗ್ರಾಮಕ್ಕೆ ಪ್ರತ್ಯೇಕ ಸಹಕಾರ ಸಂಘ – ಗ್ರಾಮಸ್ಥರ ಸಭೆ

0

ಬೆಳ್ಳಾರೆ ಪ್ರಾ.ಕೃ.ಪ.ಸಹಕಾರಿ ಸಂಘಕ್ಕೆ ಮನವಿ

ಬೆಳ್ಳಾರೆ ಸಹಕಾರಿ ಸಂಘದ ಜತೆಗಿರುವ ಪೆರುವಾಜೆ ಗ್ರಾಮಕ್ಕೆ ಪ್ರತ್ಯೇಕ ಸಹಕಾರಿ ಸಂಘ ಸ್ಥಾಪಿಸಬೇಕೆಂದು ಸೊಸೈಟಿ ಮಹಾಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಲು ಗ್ರಾಮಸ್ಥರ ಪೂರ್ವಭಾವಿ ಸಭೆಯು ಪೆರುವಾಜೆ ಗ್ರಾ.ಪಂ.ಸಭಾಭವನದಲ್ಲಿ ಸೆ.12 ರಂದು ನಡೆಯಿತು.


ಪೆರುವಾಜೆ ಗ್ರಾಮದಲ್ಲಿ ಪ್ರತ್ಯೇಕ ಸಂಘ ರಚನೆಗೆ ಎಲ್ಲಾ ವ್ಯವಸ್ಥೆಗಳಿವೆ.ಪೆರುವಾಜೆ ಗ್ರಾಮದ ಜನರ ಅನುಕೂಲದ ದೃಷ್ಟಿಯಿಂದ ಸುದೀರ್ಘ ಕಾಲದ ಬೇಡಿಕೆಗೆ ಮನ್ನಣೆ ನೀಡಿ ಪ್ರತ್ಯೇಕ ಸಹಕಾರ ಸಂಘದ ಸ್ಥಾಪನೆಗೆ ಬೆಳ್ಳಾರೆ ಸೊಸೈಟಿ ಆಡಳಿತ ಮಂಡಳಿ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.


ಸಭೆಯಲ್ಲಿ ಮಾಜಿ ಮಂಡಲ ಪ್ರಧಾನ ಜಯಸೂರ್ಯ ರೈ, ಮುಕ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಮಾಜಿ ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆ, ಗ್ರಾ.ಪ.ಸದಸ್ಯ ಸಚಿನ್ ರಾಜ್ ಶೆಟ್ಟಿ, ಮಾಜಿ ಸದಸ್ಯ ಇಬ್ರಾಹಿಂ ಅಂಬಟೆಗದ್ದೆ,ಗ್ರಾ.ಪಂ.ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆ, ಜೈನುದ್ದೀನ್ ತೋಟದಮೂಲೆ ಮೊದಲಾದವರು ಸಲಹೆ ಸೂಚನೆ ನೀಡಿದರು.


ಬೆಳ್ಳಾರೆ ಸಹಕಾರಿ ಸಂಘಕ್ಕೆ ಮನವಿ

ಪೆರುವಾಜೆ ಗ್ರಾಮಕ್ಕೆ ಪ್ರತ್ಯೇಕ ಸಹಕಾರಿ ಸಂಘ ರಚನೆ ಮಾಡಬೇಕೆಂದು ಬೇಡಿಕೆಯನ್ನು ಬೆಳ್ಳಾರೆ ಸಹಕಾರಿ ಸಂಘಕ್ಕೆ ನೀಡಲಾಯಿತು. ಸಮಿತಿ ಸಂಚಾಲಕರಾದ ದಯಾಕರ ಆಳ್ವ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಂಬಟೆಗದ್ದೆ.
ಪಂಚಾಯತ್ ಸದಸ್ಯ ರಾದ ಸಚಿನ್ ರಾಜ್ ಶೆಟ್ಟಿ, ಪದ್ಮನಾಭ ಶೆಟ್ಟಿಯವರು ಬೆಳ್ಳಾರೆ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ರೈಯವರಿಗೆ ಮನವಿ ನೀಡಿದರು.