ಪಂಜ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ:ಪಾಂಡಿಗದ್ದೆ ಶಾಲೆಗೆ ಕಿರಿಯ ವಿಭಾಗದ ಸಮಗ್ರ ದ್ವಿತೀಯ ಪ್ರಶಸ್ತಿ

0

ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.12 ರಂದು ನಡೆದ ಪಂಜ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಾಂಡಿಗದ್ದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಕಿರಿಯ ವಿಭಾಗದ ಸಮಗ್ರ ದ್ವಿತೀಯ ಪ್ರಶಸ್ತಿ ಪಡೆದಿದ್ದಾರೆ.

ಛದ್ಮವೇಷ ನಿಖಿತ್ (ಪ್ರಥಮ),ಕಥೆ ಹೇಳುವುದು ಅಚಿಂತ್ಯ(ಪ್ರಥಮ),ಅಭಿನಯ ಗೀತೆ ಭವಿಷ್ಯ(ಪ್ರಥಮ), ಆಶು ಭಾಷಣ ಕುಶಾಂಕ್ (ಪ್ರಥಮ) ,ಇಂಗ್ಲಿಷ್ ಕಂಠಪಾಠ ಪರೀಕ್ಷಾನಿ (ದ್ವಿತೀಯ), ಡ್ರಾಯಿಂಗ್ ಬಾತಿಶ (ದ್ವಿತೀಯ), ಕ್ಲೇ ಮಾಡೆಲಿಂಗ್ ನಿಖಿತ್( ತೃತೀಯ), ಸಂಸ್ಕೃತ ಧಾರ್ಮಿಕ ಪಠಣ ಅಚಿಂತ್ಯ (ತೃತೀಯ) ,ಹಿರಿಯ ಪ್ರಾಥಮಿಕ ವಿಭಾಗ ಛದ್ಮವೇಷ ಪರೀಕ್ಷಿತ (ಪ್ರಥಮ),ಆಶುಭಾಷಣ ದೀಪಿಕಾ(ಪ್ರಥಮ),ಅರೇಬಿಕ್ ಧಾರ್ಮಿಕ ಪಠಣ ಝೈನಬ ನೂರ (ತೃತೀಯ), ಭಕ್ತಿಗೀತೆ ಪರೀಕ್ಷಿತ (ತೃತೀಯ) ಸ್ಥಾನ ಪಡೆದು ಶಾಲೆಗೆ ಸಮಗ್ರ ದ್ವಿತೀಯ ಪ್ರಶಸ್ತಿ ದೊರೆತಿದೆ.