ಕೊಡಗು ಸಂಪಾಜೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

0

ಕೊಡಗು ಸಂಪಾಜೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಚೆಂಬು ಗ್ರಾಮದ ಊರುಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.12ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಾ ಎಸ್. ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಜಿ. ಆರ್. ಚೆಂಬು ಗ್ರಾ.ಪಂ. ಸದಸ್ಯರಾದ ರಮೇಶ ಹುಲ್ಲುಬೆಂಕಿ, ವಸಂತ ಎನ್ ಟಿ, ಶ್ರೀಮತಿ ಕುಸುಮ ಎ, ಕೊಡಗು ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಚೆಂಬು ಪ್ರೌಢ ಶಾಲಾ ಶಿಕ್ಷಕಿ ಶ್ರೀಮತಿ ಕಾಮಾಕ್ಷಿ ಪಿ ಎಸ್, ಕೊಯನಾಡು ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಸುಲೋಚನಾ , ಕ್ಲಸ್ಟರಿನ ಸಿ.ಆರ್.ಪಿ. ಶ್ರೀಮತಿ ರೇಖಾ ಯು. ಎಸ್. , ಶಾಲಾ ಮುಖ್ಯಶಿಕ್ಷಕರಾದ ಸೋಮಣ್ಣ ಕೆ. ಆರ್. ಉಪಸ್ಥಿತರಿದ್ದರು.


ಕೊಡಗು ಸಂಪಾಜೆ ಕ್ಲಸ್ಟರಿನ ಏಳು ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಕೊಡಗು ಸಂಪಾಜೆ ಕ್ಲಸ್ಟರಿನ ಎಲ್ಲಾ ಶಾಲಾ ಎಸ್. ಡಿ. ಎಂ. ಸಿ. ಪದಾಧಿಕಾರಿಗಳು, ಮಕ್ಕಳ ಪೋಷಕರು, ಶಿಕ್ಷಕರು, ಚೆಂಬು ಗ್ರಾ.ಪಂ. ಸದಸ್ಯರುಗಳು, ಶಾಲಾ ಸಿಬ್ಬಂಧಿಗಳು ಸಹಕರಿಸಿದರು.
ತೀರ್ಪುಗಾರರಾಗಿ ಪೆರಾಜೆ ಕ್ಲಸ್ಟರಿನ ಶಿಕ್ಷಕರು ಮತ್ತು ಪ್ರೌಢ ಶಾಲಾ ಶಿಕ್ಷಕರು ಭಾಗವಹಿಸಿ, ಸಹಕರಿಸಿದರು.