ಆಲೆಟ್ಟಿ ಕಸ್ತೂರಿ ಬಾ‌ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆ

0

ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆಯು ಮಹಿಳಾ ಮಂಡಲದ ಅಧ್ಯಕ್ಷೆ ಯಶೋಧ ಕುಡೆಕಲ್ಲು ಅಧ್ಯಕ್ಷತೆಯಲ್ಲಿ ಸೆ.9 ರಂದು ಆಲೆಟ್ಟಿ ಮಹಿಳಾ ಮಂಡಲದ ಭವನದಲ್ಲಿ ನಡೆಯಿತು.

ಮುಂದಿನ 2023-24 ನೇ ಸಾಲಿನ ಅಧ್ಯಕ್ಷರಾಗಿ ಯಶೋಧ ಕುಡೆಕಲ್ಲು ರವರುಪುನರಾಯ್ಕೆಗೊಂಡರು. 2022-23 ನೇ ಸಾಲಿನ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಮುಂದಿನ ಅವಧಿಗೆ ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು.
ಕಾರ್ಯದರ್ಶಿ ಜಲಜಾಕ್ಷಿ ಆಲೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಖಜಾಂಜಿ ಬೇಬಿ ಆಲೆಟ್ಟಿ ಲೆಕ್ಕಪತ್ರ ಮಂಡಿಸಿದರು .
ಶಿಕ್ಷಕಿ ಯಶೋಧ ಗುಂಡ್ಯ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕಿ ಗೀತಾ ಸುಧಾಮ ಆಲೆಟ್ಟಿ ಸ್ವಾಗತಿಸಿ, ವಂದಿಸಿದರು. ಮಹಿಳಾ ಮಂಡಲದ ನಿರ್ದೇಶಕರು ಸದ್ಯಸರುಉಪಸ್ಥಿತರಿದ್ದರು.