ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು : ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು

0

2023ರ NEET ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಚಿಕ್ಕಬಳ್ಳಾಪುರ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಸೀಟ್ ಪಡೆದಿರುವ ನಮ್ಮ ಸಂಸ್ಥೆಯ ಹಮ್ಮೆಯ ವಿದ್ಯಾರ್ಥಿ ರಕ್ಷಿತ್ ಬಿ ಆರ್. ನನ್ನು ಸೆಪ್ಟೆಂಬರ್ 12ರಂದು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.

ಕಷ್ಟ ಪಟ್ಟು ಓದಿ ಸೀಟ್ ಗಳಿಸಿದ ‘ಪವೇಶ ಶುಲ್ಕ ಪಾವತಿಸಲು ಕೂಡಾ ಸಾಧ್ಯವಾಗದ ಸ್ಥಿತಿಯಲ್ಲಿ ಈತನ ಮನೆಯ ಆರ್ಥಿಕ ಪರಿಸ್ಥಿತಿ. ಇದನ್ನರಿತು ಪ್ರಾಂಶುಪಾಲರು, ಉಪನ್ಯಾಸಕರು, ಕಛೇರಿ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಿಸಿ ಒಟ್ಟು ಮೊತ್ತ ರೂ. 25,000 ನನ್ನ ಆತನಿಗೆ ನೀಡಿ ಆತನ ಮುಂದಿನ ವಿದ್ಯಾಭ್ಯಾಸಕ ಶುಭ ಹಾರೈಸಲಾಯಿತು.