ನಾಳೆ ಸುಳ್ಯದಲ್ಲಿ 10 ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ-ಅದ್ದೂರಿ ಶೋಭಾಯಾತ್ರೆ

0

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಆಶ್ರಯದಲ್ಲಿ
ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನಾ ದಿನಾಚರಣೆಯ ಅಂಗವಾಗಿ 10ನೇ ವರುಷದ ಸುಳ್ಯ ಮೊಸರು ಕುಡಿಕೆ ಉತ್ಸವ ನಾಳೆ
(ಸೆ.16) ನಡೆಯಲಿದೆ.

ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಗೆ
ಅಪರಾಹ್ನ 2 ಗಂಟೆಗೆ ಸರಿಯಾಗಿ ಆರಂಭವಾಗಲಿರುವುದು.
ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ
ಡಾ. ಹರಪ್ರಸಾದ್ ತುದಿಯಡ್ಕ ರವರು ಚಾಲನೆ ನೀಡಲಿದ್ದಾರೆ.

ಸಂಜೆ ಗಂಟೆ 6.00 ರಿಂದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಭೆಯು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು.
ಖ್ಯಾತ ವಾಗ್ಮಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸತ್ಸಂಗ ಪ್ರಮುಖ್ ಸೂರ್ಯನಾರಾಯಣ ಭಟ್ ಕಶೆಕೋಡಿ ಯವರು ಉಪನ್ಯಾಸ ನೀಡಲಿರುವರು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಸ್ವದೇಶಿ ಗೋ ಸಂರಕ್ಷಕ
ಕೆ. ವಿಶ್ವನಾಥ ಪೈ ಐವರ್ನಾಡು, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆಯ ಅಧ್ಯಕ್ಷ ಡಾ| ಕೃಷ್ಣಪ್ರಸನ್ನ ಭಾಗವಹಿಸಲಿದ್ದಾರೆ.

ಮೊಸರು ಕುಡಿಕೆ ಉತ್ಸವದ ಶೋಭಾ ಯಾತ್ರೆಯ ಪಥವು ಚೆನ್ನಕೇಶವ ದೇವಸ್ಥಾನದಿಂದ ಮೊದಲ್ಗೊಂಡು ಎಪಿಎಂಸಿ ಕುರುಂಜಿಭಾಗ್, ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜ್ ರಸ್ತೆ, ಮುಳಿಯ ಮೈದಾನ ಶಾಸ್ತ್ರಿ ವೃತ್ತ, ವಿಶ್ವ ಸೆಂಟ್ರಲ್ ಶ್ರೀರಾಮಪೇಟೆ ಸುಳ್ಯ, ಶ್ರೀಹರಿ ಕಾಂಪ್ಲೆಕ್ಸ್, ರಾಜಶ್ರೀ ಕಾಂಪ್ಲೆಕ್ಸ್, ಪಂಚಾಯತ್ ಬಸ್ ನಿಲ್ದಾಣ, ನಾಯರ್ ಕಾಂಪ್ಲೆಕ್ಸ್, ಗಾಂಧಿನಗರ, ಐಡಿಯಲ್ ಆಟೋ ವರ್ಕ್ಸ್ , ಭಗವತಿ ಹಾರ್ಡ್ ವೇರ್ಸ್ ರಥ ಬೀದಿ ಮುಂತಾದ ಕಡೆಗಳಲ್ಲಿ ವೀರ ಯುವಕರಿಂದ ಸಾಹಸಮಯ ಅಟ್ಟಿ ಮಡಕೆ ಒಡೆಯುವ ಆಕರ್ಷಕ ಸ್ಪರ್ಧೆಯು ನಡೆಯಲಿದೆ.
ಶೋಭಾಯಾತ್ರೆಯಲ್ಲಿ ನಾಸಿಕ್ ಬ್ಯಾಂಕ್ ಬ್ಯಾಂಡ್, ಹುಲಿ ವೇಷ ಕುಣಿತ ,ಚೆಂಡೆ ವಾದನ, ಬಾಲಗೋಪಾಲನ ರಥದ ಟ್ಯಾಬ್ಲೋ ಮೆರುಗು ನೀಡಲಿದೆ. ದೇವಸ್ಥಾನದ ಬಳಿ ಆಕರ್ಷಣೀಯ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ನಡೆಯಲಿದೆ ಎಂದು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ತಿಳಿಸಿದರು.