ಸುಳ್ಯ ಪೋಲೀಸ್ ವೃತ್ತ ನಿರೀಕ್ಷಕರಾಗಿ ಮೋಹನ್ ಕೊಠಾರಿ

0

ಸುಳ್ಯ ಪೋಲೀಸ್ ವೃತ್ತ ನಿರೀಕ್ಷಕರಾಗಿ ಮೋಹನ್ ಕೊಠಾರಿ ಎಂಬವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.

ಮಂಗಳೂರು ರೈಲ್ವೆಯಲ್ಲಿ ವೃತ್ತ ನಿರೀಕ್ಷಕರಾಗಿದ್ದ ಮೋಹನ್ ಕೊಠಾರಿಯವರು ಇದೀಗ ಸುಳ್ಯಕ್ಕೆ ವರ್ಗಾವಣೆ ಗೊಂಡಿದ್ದಾರೆ.

ಸುಳ್ಯ ವೃತ್ತ ನಿರೀಕ್ಷಕರಾಗಿರುವ ನವೀನ್ ಚಂದ್ರ ಜೋಗಿಯವರಿಗೆ ಈ ಹಿಂದೆ ವರ್ಗಾವಣೆಯಾಗಿತ್ತು. ಆದರೆ ಸುಳ್ಯಕ್ಕೆ ಯಾರೂ ನೇಮಕವಾಗದಿದ್ದುದರಿಂದ ಅವರೇ ಮತ್ತೆ ಸುಳ್ಯಕ್ಕೆ ಬಂದು ಅಧಿಕಾರ ವಹಿಸಿಕೊಂಡಿದ್ದರು.