ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶ್ವಗುರು ದೀಕ್ಷಾ ಕಾರ್ಯಕ್ರಮ ಸೋಣ ಶನಿವಾರ, ಶನಿ ಪೂಜೆ , ಮತ್ತು ಅನ್ನಸಂತರ್ಪಣೆ, ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಶ್ರೀನಿವಾಸ್ ಮಡ್ತಿಲ, ಅಮ್ಮಭಗವಾನ್ ಸೇವಾ ಸಮಿತಿ ಉಷಾಜಿ ಮಂಗಳೂರು, ಬೆಳ್ಳಾ ರೆ ಯ ಶ್ರೀ ಕಲ್ಕಿ ಸತ್ಸಂಗ ಸೆಂಟರ್ ನ ಜಿಲ್ಲಾ ಸಮಿತಿಯ ರಮನಾಥ್ ಈ ಅಂಕತಡ್ಕ, ಸಮಿತಿಯ ಅಧ್ಯಕ್ಷರು ಸಾವಿತ್ರಿ ಜಿ. ಐವರ್ನಾಡು ಗ್ರಾಮ , ಪ್ರೇಮ್ ಜಿ ಬೆಳ್ಳಾರೆ, ರಮನಾಥ್ ಜಿ. ಧಾರ್ಮಿಕ ವಿಷಯಗಳನ್ನು ಪ್ರಸ್ತಾಪಿಸಿದರು.
ಎಸ್.ಎನ್. ಮನ್ಮಥ ಗೌಡರು ಪ್ರತಿ ತಿಂಗಳಲ್ಲಿ ಒಂದೊಂದು ಗಂಟೆ ಭಜನಾ ಕಾರ್ಯಕ್ರಮವನ್ನು ತೊಡಗಿಸಿಕೊಳ್ಳುವ, ಭಾರತ ವಿಶ್ವಗುರು ಕಾರ್ಯಕ್ರಮಕ್ಕೆ ಭಗವಾನ್ ಭಕ್ತರು ಸಮಾಜದ ಒಳಿತಿಗಾಗಿ ಎಲ್ಲರೂ ಉಗ್ಗೂಡಬೇಕೆಂದು ವಿನಂತಿಸಿದರು.
ದೇವಸ್ಥಾನದ ಮುಖ್ಯ ಅರ್ಚಕರಿಂದ ಪ್ರಾರ್ಥನೆ, ಹಾಗೂ ಮಹಾಪೂಜೆ, ಮಂಗಳಾರತಿ, ಶನೇಶ್ವರ ಪೂಜಾ ಮತ್ತು ಪ್ರಸಾದ ವಿತರಣೆ ನಡೆಯಿತು
ಪ್ರೇಮ್ ಜಿ ವಂದಿಸಿದರು.