ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ವಾರ್ಷಿಕ ಮಹಾಸಭೆ – ಸನ್ಮಾನ

0

ತಾಲೂಕು ಪಿಗ್ಮಿ ಸಂಗ್ರಾಹಕರ ವಾರ್ಷಿಕ ಸಭೆಯು ಸೆ.24 ರಂದು ಸಂಘದ ಅಧ್ಯಕ್ಷ ಹರಿಶ್ಚಂದ್ರ ಯಂ.ಇವರ ಅಧ್ಯಕ್ಷತೆಯಲ್ಲಿ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಹರೀಶ್ಚಂದ್ರ ಯಂ.ದೀಪಬೆಳಗಿಸಿ ಉದ್ಘಾಟಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತಮಾಡಿದರು.
ಸುಳ್ಯ ವರ್ತಕ ಸಂಘದ ಅಧ್ಯಕ್ಷ ಸುಧಾಕರ ರೈ ಪಿ.ಬಿ.ಮುಖ್ಯ ಅತಿಥಿಗಳಾಗಿದ್ದು ಪಿಗ್ಮಿ ಸಂಗ್ರಾಹದಿಂದ ಉಳಿತಾಯ ಯೋಜನೆಯ ಬಗ್ಗೆ ಮಾತನಾಡಿದರು.
ಸಂಘದ ಕಾರ್ಯದರ್ಶಿ ರಾಮಚಂದ್ರ ಯದುಗಿರಿ ವರದಿ ಮಂಡಿಸಿದರು,ಕೋಶಾಧಿಕಾರಿ ಪದ್ಮನಾಭ ನೆಕ್ರಾಜೆ ಲೆಕ್ಕಪತ್ರ ಮಂಡಿಸಿದರು.

ಸನ್ಮಾನ
ಸುಳ್ಯ ತಾಲೂಕು ಹಾಲು ಉತ್ಪಾದಕರ ನೌಕರರ ಒಕ್ಕೂಟದ ಅಧ್ಯಕ್ಷ , ಬೆಳ್ಳಾರೆ ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ನ ಪಿಗ್ಮಿ ಸಂಗ್ರಾಹಕ ಹಿರಿಯಣ್ಣ ಕುಳ್ಳಂಪಾಡಿ ದಂಪತಿ ಹಾಗೂ ಅರಂತೋಡು ಗ್ರಾ.ಪಂ.ಸದಸ್ಯ , ಅರಂತೋಡು ಸಹಕಾರಿ ಸಂಘದ ಪಿಗ್ಮಿ ಸಂಗ್ರಾಹಕ ಪುಷ್ಪಾಧರರವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ವೆಂಕಟ್ರಮಣ ಮುಳ್ಯ, ಉಪಾಧ್ಯಕ್ಷ ವಸಂತ ಬೋರ್ಕರ್ ಉಪಸ್ಥಿತರಿದ್ದು ಮಾತನಾಡಿದರು.
ಜತೆಕಾರ್ಯದರ್ಶಿ ಮಹಾಬಲ ರೈ ಹಾಗೂ ಸಂಘದ ನಿರ್ದೇಶಕರು,ಸದಸ್ಯರು ಉಪಸ್ಥಿತರಿದ್ದರು.


ನೂತನ ಪದಾಧಿಕಾರಿಗಳ ಆಯ್ಕೆ

ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಹರಿಶ್ಚಂದ್ರ ಯಂ, ಉಪಾಧ್ಯಕ್ಷರಾಗಿ ವಸಂತ ಬೋರ್ಕರ್, ಕಾರ್ಯದರ್ಶಿಯಾಗಿ ಸುನಿಲ್ ಜಟ್ಟಿಪಳ್ಳ,ಜತೆ ಕಾರ್ಯದರ್ಶಿಯಾಗಿ ಮಹಾಬಲ
ರೈ, ಕೋಶಾಧಿಕಾರಿಯಾಗಿ ಪುಷ್ಪಾಧರ ಕೆ.ಜಿ ಆಯ್ಕೆಯಾದರು.
ನಿರ್ದೇಶಕರಾಗಿ ಕು.ಲತಾ,ಶ್ರೀಮತಿ ಆರತಿ, ರಾಧಾಕೃಷ್ಣ ಬಿ,ವಿ ,ಜಯಂತಿ ಆಯ್ಕೆಯಾದರು.
ಸಲಹಾ ಸಮಿತಿ ಗೌರವಾಧ್ಯಕ್ಷರಾಗಿ ವೆಂಕಟ್ರಮಣ ಮುಳ್ಯ, ರಾಮಚಂದ್ರ ಯದುಗಿರಿ,ಹಿರಿಯಣ್ಣ ಐವರ್ನಾಡು,ರಾಮಕೃಷ್ಣ ಯು ಆಯ್ಕೆಯಾದರು.