ಪೆರಾಜೆ ಗ್ರಾ.ಪಂ. ವತಿಯಿಂದ ಶಾಲೆಗಳಿಗೆ ಕ್ರೀಡಾಸಾಮಾಗ್ರಿ ವಿತರಣೆ

0

ಪೆರಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಕ್ರೀಡಾ ಸಾಮಾಗ್ರಿಗಳನ್ನು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರುಗಳು ಮತ್ತು ಪಂಚಾಯತ್ ಪಿಡಿಓ, ಸಿಬ್ಬಂದಿಗಳ ಮೂಲಕ ಸೆ.26ರಂದು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪೆರಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯೋಪಾ
ಧ್ಯಾಯರು, ಎಸ್. ಡಿ. ಎಂ.ಸಿ. ಅಧ್ಯಕ್ಷರುಗಳು,ಉಪಸ್ಥಿತರಿದ್ದು, ಕ್ರೀಡಾ ಸಾಮಾಗ್ರಿಗಳನ್ನು ಪಡೆದುಕೊಂಡರು.