ವಾರ್ಡ್ ಮಟ್ಟದಲ್ಲೂ ಸ್ವಚ್ಛತೆ ಕಾರ್ಯ
ಗಾಂಧಿ ಜಯಂತಿ ಪ್ರಯುಕ್ತ ಗುತ್ತಿಗಾರು ಗ್ರಾಮ ಪಂಚಾಯತ್ ನ ವತಿಯಿಂದ ಅ.2 ರಂದು ಪಂಚಾಯತ್ ನ ಗಿರಿಜನ ಸಭಾಭವನದಲ್ಲಿ ಗಾಂಧಿ ಜಯಂತಿ ಆಚರಣೆ ಹಾಗೂ ವಿಶೇಷ ಗ್ರಾಮ ಸಭೆ ನಡೆಯಿತು.
ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಮೂಕಮಲೆ ದೀಪ ಬೆಳಗಿಸಿ ಗಾಂಧೀಜಿ ಪೋಟೋ ಕೆ ಪುಷ್ಷಾರ್ಚ್ಚನೆ ಮಾಡುವುದರ ಮೂಲಕ ಗ್ರಾಮ ಸಭೆ ಪ್ರಾರಂಭಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ ನರೇಗಾ ಯೋಜನೆಯಡಿ ಕೆಲಸಮಾಡುವ ಮಾಹಿತಿಯನ್ನು ತಿಳಿಸಿದರು. ಈ ಸಭೆಯಲ್ಲಿ ಪಂಚಾಯತ್ ನ ಉಪಾಧ್ಯಕ್ಷ ರು ಸದಸ್ಯರು ಪಂಚಾಯತ್ ಸಿಬಂಧಿಗಳು , ಗ್ರಂಥಾಲಯ ದ ಗ್ರಂಥಪಾಲಕಿ, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ದ ಅಧ್ಯಕ್ಷೆ, ಕಾರ್ಯದರ್ಶಿ , ಪದಾಧಿಕಾರಿಗಳು ಎಂ.ಬಿ.ಕೆ, ಎಲ್.ಸಿ.ಆರ್.ಪಿ ಹಾಗೂ ಗ್ರಾಮ ದ ಗ್ರಾಮಸ್ಥರು ಹಾಜರಿದ್ದರು.
ನಂತರ ಬೃಹತ್ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು.
ಗುತ್ತಿಗಾರು ಗ್ರಾ. ಪಂ. ವಠಾರ – ಪೇಟೆ ಸ್ವಚ್ಚತೆ
ಗುತ್ತಿಗಾರು ಪೇಟೆ ಸ್ವಚ್ಛತೆಯ ಜೊತೆಗೆ ಸ್ವಚ್ಛತಾ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಪದಾಧಿಕಾರಿಗಳೊಂದಿಗೆ ಸುಳ್ಯ ಕ್ಷೇತ್ರ ದ ಶಾಸಕಿ ಕುಮಾರಿ ಭಾಗೀರಥಿ ಸ್ವಚ್ಛತಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ದ್ದರು. ಲಯನ್ಸ್ ಪದಾಧಿಕಾರಿಗಳು ಘನ ತ್ಯಾಜ್ಯ ವಿಲೇವಾರಿ ಮಾಡುವ 3 ಸದಸ್ಯರಿಗೆ ಸೀರೆಯನ್ನು ಶಾಸಕಿಯವರ ಕೈ ಯಲ್ಲಿ ಹಸ್ತಾಂತರ ಮಾಡಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಿ.ಡಿ.ಒ, ಅಧ್ಯಕ್ಷರು, ಉಪಾದ್ಯಕ್ಷರು,ಸದಸ್ಯರು, ಪಂಚಾಯತ್ ಸಿಬಂದಿಗಳು, ಗ್ರಂಥಾಲಯ ದ ಗ್ರಂಥಪಾಲಕಿ, ವರ್ತಕರ ಸಂಘದ ಅಧ್ಯಕ್ಷರು,ಸದಸ್ಯರು, ಅಮರ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು,ಕಾರ್ಯದರ್ಶಿ, ಎಂ.ಬಿ.ಕೆ,ಎಲ್.ಸಿ.ಆರ್.ಪಿಗಳು, ಸಿದ್ದಿದಾತ್ರಿ ಸಂಜೀವಿನಿ, ಸ್ವಸ್ತಿಕ್ ಸಂಜೀವಿನಿ ಹಾಗು ಒಕ್ಕೂಟದ ಪದಾಧಿಕಾರಿಗಳು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ ಯರು ಸ್ವಚ್ಚತೆಯಲ್ಲಿ ಭಾಗಿಯಾಗಿದ್ದರು.
ವಳಲಂಬೆಯಲ್ಲಿ ಸ್ವಚ್ಛತೆ:
ಕಾಜಿಮಡ್ಕದಿಂದ ವಳಲಂಬೆ ಪೇಟೆ ಹಾಗೂ ಶ್ರೀ ಶಂಖಪಾಲ ದೇವಸ್ಥಾನದ ವಠಾರದಲ್ಲಿ ಸ್ವಚ್ಚತೆ ಮಾಡಲಾಯಿತು. ಗ್ರಾ. ಪಂ. ಸದಸ್ಯರಾದ ವೆಂಕಟ್ ವಳಲಂಬೆ, ಗುತ್ತಿಗಾರು ಸೊಸೈಟಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಸ್ಥಳೀಯರು ಗ್ರಾಮಸ್ಥರು ಸೇರಿ ಸ್ವಚ್ಛತೆ ಮಾಡಿದರು.
ಅಂಗನವಾಡಿ ಕೇಂದ್ರದ ಸ್ತ್ರೀಶಕ್ತಿ ಗುಂಪುಗಳು ಸಂಜೀವಿನಿ ಸ್ವಸಹಾಯ ಸಂಘಗಳು ಹಾಗೂ ಅಂಗನವಾಡಿ ಕೇಂದ್ರದ ಪೋಷಕರ ಸಹಯೋಗದೊಂದಿಗೆ.
ಸ.ಹಿ ಪ್ರಾ ಶಾಲೆ ವಳಲಂಬೆ ಶಾಲೆಯಲ್ಲಿ ನಡೆದ ಗಾಂಧಿಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಛತಾ ಕಾರ್ಯಕ್ರಮವನ್ನು ಅಂಗನವಾಡಿ ಕೇಂದ್ರದ ಸಹಯೋಗದೊಂದಿಗೆ ಕೇಂದ್ರದ ಸುತ್ತಮುತ್ತ ಕಾಡು ಕಡಿದು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯದಲ್ಲಿ ಶ್ರೀ ದುರ್ಗಾಸ್ತ್ರೀ ಶಕ್ತಿ, ಶಂಖಪಾಲ ಸ್ತ್ರೀಶಕ್ತಿ ಹಾಗೂ ಶಂಖ ಶ್ರೀ ಸ್ತ್ರೀಶಕ್ತಿ ವಳಲಂಬೆ, ಭಾಂದವ್ಯ ಸಂಜೀವಿನಿ, ಚಿಗುರು ಸಂಜೀವಿನಿ ಹಾಗೂ ಯಶಸ್ವಿ ಸಂಜೀವಿನಿ ಸಂಘದ ಸದಸ್ಯರು. ಶಂಖ ಶ್ರೀ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಸರೋಜಿನಿ ಮುಳುಗಾಡು, ಅಂಗನವಾಡಿ ಮಕ್ಕಳ ಪೋಷಕರು, ಅಮರ ಸಂಜೀವಿನಿ ಒಕ್ಕೂಟದ ಪಶುಸಖಿ ಕು|ಚೈತನ್ಯ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಭಾಗವಹಿಸಿದ್ದರು.
ಕಮಿಲ ವಾರ್ಡ ನಲ್ಲಿ ಸ್ವಚ್ಛತೆ –
ಕಮಿಲ ವಾರ್ಡ್ ನಲ್ಲಿ ಪಂಚಾಯತ್ ಸದಸ್ಯೆ ಲತಾ ಆಜಡ್ಕ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು. ಬಾಂಧವ್ಯ ಗೆಳೆಯರ ಬಳಗದ ಅಧ್ಯಕ್ಷರು, ಹಾಗೂ ಸದಸ್ಯರುಗಳು,ಗ್ರಾಮ ಪಂಚಾಯಿತಿ ಸದಸ್ಯರುಗಳು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರು, ಶ್ರೀನಿಧಿ ಸಂಜೀವಿನಿ ಸಂಘದ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು ಹಾಗೂ ಊರಿನವರು ಭಾಗವಹಿಸಿದ್ದರು. ಕಮಿಲ ಪೇಟೆಯಿಂದ ಚತ್ರಪ್ಪಾಡಿಯವರೆಗೆ ಕಾಡು ಕಡಿದು ಕಸ ಹೆಕ್ಕಿ ಸ್ವಚ್ಛತೆ ಮಾಡಲಾಯಿತು.
ಹಾಲೆಮಜಲು ಸ್ವಚ್ಛತೆ
ಹಾಲೆಮಜಲು ಪರಿಸರದಲ್ಲಿ ಕಾಡುಕಡಿದು ಕಸ ಹೆಕ್ಕಿ ಸ್ವಚ್ಛತೆ ಮಾಡಲಾಯಿತು
ಹೊಂಬೆಳಕು ಸ್ವಚ್ಚತಾ ತಂಡ ನಾಲ್ಕೂರು, ಆದರ್ಶ ಯೂತ್ ಕ್ಲಬ್ ಹಾಲೆಮಜಲು, ಶೌರ್ಯ ವಿಪತ್ತು ನಾಲ್ಕೂರು,ಧರ್ಮಸ್ಥಳ ಸಂಘ ನಾಲ್ಕೂರು, ಮಹಿಳೆಯರು ಮತ್ತುಸಾರ್ವಜನಿಕರು ಸೇರಿ ಸ್ವಚ್ಛತೆ ಮಾಡಿದರು