ಕಟ್ಟಡ, ನೀರಿನ ತೆರಿಗೆ ಪಾವತಿಗೆ 15 ದಿನಗಳ ಗಡುವು ನೀಡಿದ ನ.ಪಂ.

0

ತೆರಿಗೆ ಪಾವತಿಸದಿದ್ದರೆ ಕಾನೂನು ಕ್ರಮ : ಸೂಚನೆ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯೊಳಗೆ ಕಟ್ಟಡ ತೆರಿಗೆ, ಉದ್ಯಮ ಪರವಾನಿಗೆ ಶುಲ್ಕ ಹಾಗೂ ನೀರಿನ ಶುಲ್ಕ ಇತ್ಯಾದಿ ತೆರಿಗೆಗಳು ಬಾಕಿ ಇರುವ ಹಿನ್ನಲೆಯಲ್ಲಿ ನಗರ ಪಂಚಾಯತಿನ ವತಿಯಿಂದ ೨೦ ವಾರ್ಡುಗಳಲ್ಲಿ ವಸೂಲಾತಿ ಆಂದೋಲನಕ್ಕೆ ನಗರ ಪಂಚಾಯತಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರತೀ ವಾರ್ಡುಗಳಲ್ಲಿ ಬಾಕಿ ಇರುವ ಬಾಕಿದಾರರನ್ನು ಜಾಗೃತಗೊಳಿಸಲು ನಗರ ಪಂಚಾಯತ್ ಮೈಕ್ (ಅನೌನ್ಸ್) ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದೆ. ನಗರ ಪಂಚಾಯತಿನ ಎಲ್ಲ ಕಾಮಗಾರಿಗಳಿಗೆ ಹಾಗೂ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ತೆರಿಗೆ ಹಣದಿಂದಲೇ ಪಾವತಿಸಬೇಕಾಗಿರುತ್ತದೆ. ಈಗಾಗಲೇ ರಾಜ್ಯ ಸರಕಕಾರದ ವತಿಯಿಂದ ಆದೇಶ ಮಾಡಿರುವಂತೆ ಶೇ. ೧೦೦ರಷ್ಟು ತೆರಿಗೆಯನ್ನು ಜನವರಿ ತಿಂಗಳ ಅಂತ್ಯದೊಳಗೆ ವಸೂಲಾತಿ ಮಾಡಬೇಕಾಗಿದೆ. ಮತ್ತು ಕೇಂದ್ರ ಸರಕಕಾರದಿಂದ ಯಾವುದೇ ಅನುದಾನ ಬಿಡುಗಡೆ ಆಗಬೇಕಾದರೂ ಕೂಡಾ ಶೇ.೧೦೦ ರಷ್ಟು ತೆರಿಗೆ ವಸೂಲಾತಿ ಮತ್ತು ನೀರಿನ ಬಿಲ್ಲನ್ನು ವಸೂಲಿ ಪಡೆದರೆ ಮಾತ್ರ ಅನುದಾನ ಬಿಡುಗಡೆ ಆಗಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ೧೫ ದಿನಗಳ ಒಳಗಾಗಿ ನಗರ ಪಂಚಾಯತ್‌ಗೆ ಬಾಕಿ ಇರುವ ಎಲ್ಲ ರೀತಿಯ ತೆರಿಗೆಗಳನ್ನು ಪಾವತಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಸೂಲಾತಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ತೆರಿಗೆ ಪಾವತಿಗೆ ಹಾಗೂ ನೀರಿನ ಬಿಲ್ಲು ಪಾವತಿಗೆ ನಗರ ಪಂಚಾಯತ್‌ನಲ್ಲಿ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಆದುದರಿಂದ ಸಾರ್ವಜನಿಕರು ಸುಳ್ಯ ನಗರದ ಅಭಿವೃದ್ಧಿ ಹಾಗೂ ನಗರದ ಹಿತ ದೃಷ್ಠಿಯಿಂದ ನಗರ ಪಂಚಾಯತ್‌ನೊಂದಿಗೆ ಸಹಕರಿಸಬೇಕಾಗಿ ನಗರ ಪಂಚಾಯತ್ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.