ಶಿಕ್ಷಣ ಇಲಾಖೆಯಿಂದ 21 ವಿದ್ಯಾರ್ಥಿಗಳಿಗೆ ಸಾಧನ ಸಲಕರಣೆಗಳ ವಿತರಣೆ

0

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ಇದರ ವತಿಯಿಂದ ಅಲಿಂಕೋ ಸಂಸ್ಥೆಯವರು ಸಿದ್ದ ಪಡಿಸಿ ಕೊಟ್ಟಿರುವ ವಿಕಲಾಂಕಚೇತರ ಸಾಧನ ಸಲಕರಣೆಗಳ ವಿತರಣೆ ಅ.7 ರಂದು ನಡೆಯಿತು.

ಶಾಸಕಿ ಕು.ಭಾಗೀರಥಿ ಮುರುಳ್ಯ ಸಾಧನಾ ಸಲಕರಣೆಗಳನ್ನು ವಿವರಿಸಿದರು. ವಿಕಲಾಂಗತನ ಶಾಪ ಎಂದು ಯಾರೂ ಭಾವಿಸಬಾರದು. ಅದೊಂದು ವರವೆಂದು ತಿಳಿದುಕೊಳ್ಳೋಣ. ಇಂತ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮಕ್ಕಳ ಪೋಷಕರು ಮುಂದೆ ಬಂದಿರುವುದು ನೋಡುವಾಗ ಖುಷಿಯಾಗುತ್ತಿದೆ. ಇವರಿಗೆ ಸರಕಾರಗಳು ಕೂಡಾ ಸಹಕಾರ ನೀಡುತ್ತದೆ. ಇಂತ ಮಕ್ಕಳು ಸ್ವಾವಲಂಬಿಯಾಗಿ ಬದುಕಲು ನಾವು ಪ್ರೇರಣೆ ನೀಡಬೇಕು ಎಂದು ಹೇಳಿದರು.
ನೋಡೆಲ್ ಅಧಿಕಾರಿ ದೇವರಾಜ್ ಮುತ್ಲಾಜೆ, ಸಿ.ಆರ್. ಪಿ ಸವಿತಾ ವೇದಿಕೆಯಲ್ಲಿ ಇದ್ದರು.

ವೀಲ್ ಚಯರ್, ಟ್ರೈಸಿಕಲ್, ಇಯರ್ ಪ್ಯಾಡ್ ಹಾಗೂ ವಾಕರ್ ಗಳನ್ನು ವಿತರಿಸಲಾಯಿತು. 21 ಮಕ್ಕಳು ಈ ಸೌಲಭ್ಯ ಪಡೆದುಕೊಂಡರು.

ಅನುದಾನಕ್ಕೆ ಬೇಡಿಕೆ : ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರ ಮಳೆಗಾಲದಲ್ಲಿ ಸೋರುತ್ತದೆ. ಇಲ್ಲಿಗೆ ಬರುವ ವಿಕಲಾಂಗಚೇತನ ಮಕ್ಕಳು ಜಾರಿ ಬೀಳುವ ಸ್ಥಿತಿಯೂ ಇದೆ. ಆದ್ದರಿಂದ ‌ಕಟ್ಟಡದ ಮೇಲ್ಭಾಗಕ್ಕೆ ಶೀಟುಗಳ ಹೊದಿಕೆ ಹಾಕಬೇಕು.‌ಅದಕ್ಕಾಗಿ ರೂ.5 ಲಕ್ಷ ಅನುದಾನ ಶಾಸಕರು ಒದಗಿಸಬೇಕು ಎಂದು ದೇವರಾಜ್ ಮುತ್ಲಾಜೆಯವರು ಬೇಡಿಕೆ ಇಟ್ಟಾಗ, “ಈ ಕಟ್ಟಡದ ದುರಸ್ತಿ ಆದಷ್ಟು ಶೀರ್ಘವಾಗಿ ಅನುದಾನ ಒದಗಿಸುತ್ತೇನೆ” ಎಂದು ಶಾಸಕಿ ಭಾಗೀರಥಿ ಮುರುಳ್ಯ ರು ಭರವಸೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈ.ರಮೇಶ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಶ್ರೀಮತಿ ಕೃತಿಕಾ ಕಾರ್ಯಕ್ರಮ ನಿರೂಪಿಸಿದರು.