ಸುಳ್ಯದ ಕೇರ್ಪಳ ರಸ್ತೆಯಲ್ಲಿರುವ ಬೂಡು ಭಗವತಿ ದ್ವಾರದ ಬಳಿ ನವೀನ್ ಡಿ ಸೋಜಾ ಮಾಲಕತ್ವದ ಸಸ್ಯಹಾರಿ ಮತ್ತು ಮಾಂಸಾಹಾರಿ ಹೋಟೆಲ್ ಇಮ್ಯಾನುವೇಲ್ ಅ. 8 ರಂದು ಶುಭಾರಂಭಗೊಂಡಿದೆ.
ಈ ಸಂದರ್ಭದಲ್ಲಿ ಝೋಎ ಮಿನಿಸ್ಟ್ರೇಸ್ ಚರ್ಚ್ ಪಾಸ್ಟರ್ ಗ್ರೆಗೊರಿ ಡಿ. ಸೋಜಾ, ರೇಮಂಡ್ ಮೊಂತೆರೋ, ಶ್ರೀಮತಿ ಲೋಲಿಟಾ ಡಿ.ಸೋಜಾ, ಜಿಬ್ಸನ್ ಡಿ ಸೋಜಾ ಶ್ರೀಮತಿ ಮಿನಿ, ಶ್ರೀಮತಿ ಮರಿಯಾ ಡಿ. ಸೋಜಾ, ನಿಕೊಲಸ್ ಡಿ. ಸೋಜಾ ಉಪಸ್ಥಿತರಿದ್ದರು.
ಇಲ್ಲಿ ಬಾಳೆ ಎಲೆ ಮೀನಿನ ಊಟ ವಿಶೇಷತೆಯಾಗಿದ್ದು, ಚಾ, ಕಾಫಿ ತಿಂಡಿ ಹಾಗೂ ಇನ್ನಿತರ ರುಚಿಕರ ತಿಂಡಿ ತಿನಿಸುಗಳು ಲಭ್ಯವಿದೆ. ಜೊತೆಗೆ ಕ್ಯಾಟರಿಂಗ್ ಸರ್ವಿಸ್ ಕೂಡ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.