ಹರಿಹರ ಗ್ರಾ. ಪಂ ಪಿ. ಡಿ. ಒ ಆಗಿ ಶ್ಯಾಮ್ ಪ್ರಸಾದ್ ಅಧಿಕಾರ ಸ್ವೀಕಾರ

0

ಹರಿಹರ ಪಲ್ಲತಡ್ಕ ಗ್ರಾ.ಪಂ ಪಿಡಿಒ ಆಗಿ ಐವರ್ನಾಡು ಗ್ರಾ.ಪಂ ನ ಪಿ.ಡಿ.ಒ ಶ್ಯಾಮ ಪ್ರಸಾದ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಸಂದರ್ಭ ಹರಿಹರ ಪಲ್ಲತಡ್ಕ ಗ್ರಾ.ಪಂ ನ ನಿವೃತ್ತ ಪಿ.ಡಿ.ಒ ಪುರುಷೋತ್ತಮ ಮಣಿಯಾನ ಪೈಲ್ ಹಸ್ತಾಂತರಿಸಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ವಿಜಯಕುಮಾರ್ ಅಂಙಣ , ಗ್ರಾ.ಪಂ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಹರಿಹರ ಪಲ್ಲತಡ್ಕದಲ್ಲಿ ಮಂಗಳವಾರ, ಗುರುವಾರ, ಶನಿವಾರ ಕರ್ತವ್ಯದಲ್ಲಿ ಇರಲಿದ್ದಾರೆ.