ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇದರ ಎನ್ಎಸ್ಎಸ್ ಘಟಕದ ವತಿಯಿಂದ ವಾರ್ಷಿಕ ಶಿಬಿರ ತೊಡಿಕಾನ ಶಾಲೆಯಲ್ಲಿ ಅಕ್ಟೋಬರ್ 11ರಂದು ಉದ್ಘಾಟನೆಗೊಂಡಿತ್ತು
ಅರಂತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಅಡ್ತಲೆ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿದರು. ಆಡಳಿತ ಮಂಡಳಿ ಸಂಚಾಲಕರು, ನಿವೃತ್ತ ಪ್ರಾo ಶುಪಾಲ ಕೆ ಆರ್ ಗಂಗಾಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರ ಪಂಜಿಕೋಡಿ, ತೊಡಿಕಾನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಕಾಲೇಜಿನ ಮುಖ್ಯ ಶಿಕ್ಷಕ ಸೀತಾರಾಮ ಎಂ ಕೆ,ತೊಡಿಕಾನ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ನವೀನ್ ಎ.ಬಿ, ಎನ್ಎಸ್ಎಸ್ ನಿಕಟ ಪೂರ್ವ ಕಾರ್ಯಕ್ರಮ ಅಧಿಕಾರಿ ಗೌರಿಶಂಕರ ಎಂ ಬಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭವಾನಿ ಚಿಟ್ಟನೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಪ್ರಾಂಶುಪಾಲ ರಮೇಶ್ ಎಸ್ ಸ್ವಾಗತಿಸಿ, ಶಿಬಿರಾಧಿಕಾರಿ ಲಿಂಗಪ್ಪ ಎಂ ವಂದಿಸಿದರು. ಉಪನ್ಯಾಸಕ ಪದ್ಮಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ವಾರ್ಷಿಕ ಶಿಬಿರವು ಒಂದು ವಾರಗಳ ಕಾಲ ನಡೆಯಲಿದ್ದು, ಅಕ್ಟೋಬರ್ 17ರಂದು ಸಮಾರೋಪ ಸಮಾರಂಭ ನಡೆಯಲಿದೆ. ತೊಡಿಕಾನ ಆರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮಟ್ಟೆ ಸಮಾರೋಪ ಭಾಷಣ ಮಾಡಲಿದ್ದಾರೆ. ಶಿಬಿರದಲ್ಲಿ ಪ್ರತಿದಿನ ಸುಪ್ರಭಾತ, ಪ್ರಾರ್ಥನೆ, ದ್ವಜಾರೋಹಣ, ಶ್ರಮದಾನ, ಶೈಕ್ಷಣಿಕ ಕಾರ್ಯಕ್ರಮ, ನೈತಿಕ ಶಿಕ್ಷಣ, ಕ್ರೀಡೆ, ಧ್ವಜಾವರೋಹಣ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ತೊಡಿಕಾನದ ಸ್ಥಳೀಯ ಸಂಘ ಸಂಸ್ಥೆಗಳು, ಶಾಲಾ ಪೋಷಕರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಎನ್ಎಸ್ಎಸ್ ವಿದ್ಯಾರ್ಥಿಗಳೊಂದಿಗೆ ಶ್ರಮದಾನದಲ್ಲಿ ಭಾಗವಹಿಸಲಿದ್ದಾರೆ. ಶಿಬಿರದ ನಿರ್ದೇಶಕರಾದ ಪ್ರಾಂಶುಪಾಲ ರಮೇಶ್, ಶಿಬಿರಾಧಿಕಾರಿ ಲಿಂಗಪ್ಪ ಎಂ, ಸಹ ಶಿಬಿರಾಧಿಕಾರಿ ಭಾಗ್ಯಶ್ರೀ ಎಚ್ ಬಿ, ಘಟಕದ ನಾಯಕರಾದ ಮನ್ವಿತ್ ಬಿ ಎಸ್ ಹಾಗೂ ಕು.ಸುಶ್ಮಿತಾ ಜಿ ಇವರು ಶಿಬಿರದ ನೇತೃತ್ವವನ್ನು ವಹಿಸಿದ್ದಾರೆ. ತೊಡಿಕಾನ ಶಾಲೆಯ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಹಾಗೂ ಸಹಶಿಕ್ಷಕರು, ಶಾಲಾ ಎಸ್ ಡಿ ಎಂ ಸಿ ಸದಸ್ಯರು ವಿದ್ಯಾರ್ಥಿಗಳೊಂದಿಗೆ ಸಹಕರಿಸಿದರು.