ಸುಳ್ಯ ದಸರಾ ಶೋಭಾ ಯಾತ್ರೆ ಹಿನ್ನೆಲೆ: ನಾಳೆ ಅಪರಾಹ್ನ 3 ಗಂಟೆಯಿಂದ ಸುಳ್ಯ ನಗರದ ಮುಖ್ಯ ರಸ್ತೆ ಬದಿ ವಾಹನ ಪಾರ್ಕ್ ಮಾಡದಂತೆ ಪೊಲೀಸ್ ಇಲಾಖೆ ಸೂಚನೆ

0

ಸುಳ್ಯ ಶಾರದಾಂಬಾ ಉತ್ಸವ ದಸರಾ ಶೋಭಾ ಯಾತ್ರೆ ಅಕ್ಟೋಬರ್ 28ರಂದು ಅಪರಾಹ್ನ ನಡೆಯುವ ಹಿನ್ನೆಲೆಯಲ್ಲಿ 3 ಗಂಟೆಯಿಂದ ಶೋಭಾ ಯಾತ್ರೆ ಸಾಗುವ ರಸ್ತೆಗಳ ಎರಡು ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸದಂತೆ ಸುಳ್ಯ ಪೊಲೀಸ್ ಠಾಣಾ ವತಿಯಿಂದ ಸಾರ್ವಜನಿಕರಿಗೆ ಪ್ರಕಟಣೆಯನ್ನು ನೀಡಿದ್ದಾರೆ.

ಕಾರ್ಯಕ್ರಮಕ್ಕೆ ಬರುವವರು ಕೂಡ ತಮ್ಮ ತಮ್ಮ ವಾಹನಗಳನ್ನು ಶೋಭಾ ಯಾತ್ರೆ ಸಾಗುವ ರಸ್ತೆ ಬದಿಗಳಲ್ಲಿ ನಿಲ್ಲಿಸಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಜಾಗೃತಿ ವಹಿಸಿಕೊಳ್ಳಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.