ಹರಿಹರಪಲ್ಲತ್ತಡ್ಕ ಕ್ಯಾಂಪ್ಕೋ ಶಾಖೆ ಡೆಪ್ಯುಟಿ ಮೆನೇಜರ್ ಸೋಮಪ್ರಕಾಶ್ ಪವಿತ್ರಮಜಲು ನಿವೃತ್ತಿ

0

ಹರಿಪಲ್ಲತ್ತಡ್ಕ ಕ್ಯಾಂಪ್ಕೋ ಶಾಖೆಯ ಡೆಪ್ಯುಟಿ ಮೆನೇಜರ್ ಸೋಮಪ್ರಕಾಶ್ ಪಿ.ಡಿ. ಪವಿತ್ರಮಜಲುರವರು ಅ.31 ರಂದು ಸೇವೆಯಿಂದ ನಿವೃತ್ತಿಗೊಳ್ಳಲಿದ್ದಾರೆ.
ಇವರು ಕ್ಯಾಂಪ್ಕೋ ಸಂಸ್ಥೆಯ ವಿವಿಧ ಕಡೆಗಳ ಶಾಖೆಗಳಲ್ಲಿ ಸುಮಾರು 34 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದರು.
ಇವರು 1989 ರಲ್ಲಿ ಚೆನ್ನೈಯಲ್ಲಿ ಕ್ಯಾಂಪ್ಕೋ ಸಂಸ್ಥೆಗೆ ಸೇವೆಗೆ ಸೇರಿ ಬಳಕ ಅಲ್ಲಿಂದ ವರ್ಗಾವಣೆಗೊಂಡು ಪುತ್ತೂರು,ಬದಿಯಡ್ಕ,ತ್ರಿಶೂರ್, ಕೊಪ್ಪ,ಬಾಯಾರು,ಚಾಮರಾಜನಗರ,ಹರಿಹರಪಲ್ಲತ್ತಡ್ಕ, ಕ್ಯಾಲಿಕಟ್,ಇಡ್ಕಿದು,ಚಾಮರಾಜನಗರ,ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ ಸೇವೆ ಸಲ್ಲಿಸಿ ನಂತರ ಅಲ್ಲಿಂದ ಹರಿಹರಪಲ್ಲತ್ತಡ್ಕ ಕ್ಯಾಂಪ್ಕೋ ಶಾಖೆಗೆ ವರ್ಗಾವಣೆಗೊಂಡು ಬಂದು ಸೇವೆ ಸಲ್ಲಿ ಅ‌.31 ರಂದು ಸೇವಾ ನಿವೃತ್ತಿಗೊಳ್ಳಲಿದ್ದರೆ.
ಇವರು ಐವರ್ನಾಡು ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯರಾದ ದಿ.ದೇವಪ್ಪ ಗೌಡ ಪವಿತ್ರಮಜಲು ಮತ್ತು ಶ್ರೀಮತಿ ಇಂದಿರಾ ದಂಪತಿಗಳ ಪುತ್ರ.
ಇವರ ಪತ್ನಿ ಶ್ರೀಮತಿ ಸುಜಾತ ಪವಿತ್ರಮಜಲುರವರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆಯಾಗಿದ್ದು ಪ್ರಸ್ತುತ ಸದಸ್ಯರಾಗಿದ್ದಾರೆ.
ಪುತ್ರಿ ಮುಕ್ತಾರವರು ಸುಳ್ಯ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಬಿಎಎಂಎಸ್ ಮಾಡಿ ಈಗ ಎಂ.ಡಿ.ಮಾಡುತ್ತಿದ್ದಾರೆ.ಪುತ್ರರಾದ ನಂದಕುಮಾರ್ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡುತ್ತಿದ್ದಾರೆ.
ತೇಜಸ್ ಐವರ್ನಾಡು ಶಾಲೆಯಲ್ಲಿ 6 ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.