ಸುಳ್ಯ ನ್ಯಾಯಲಯದಲ್ಲಿ ಭ್ರಷ್ಟಚಾರ ವಿರುದ್ಧ ಜಾಗೃತಿ ಮೂಡಿಸಲು ಜಾಗೃತಿ ಅರಿವು ಸಪ್ತಾಹ

0

ಹಿರಿಯ ಸಿವಿಲ್ ನ್ಯಾಯಧೀಶ ಬಿ ಮೋಹನ್ ಬಾಬುರವರಿಂದ ಪ್ರಮಾಣವಚನ ಬೋಧನೆ


ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ಅ.೩೦ರಂದು ಸುಳ್ಯ ನ್ಯಾಯಲಯದಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸಲು ಜಾಗೃತಿ ಅರಿವು ಸಪ್ತಾಹ ೨೦೨೩ ಕಾರ್ಯಕ್ರಮವನ್ನು ನಡೆಸಲಾಯಿತು.


ಅಕ್ಟೋಬರ್ 30 ರಿಂದ ನವಂಬರ್ 5ರ ತನಕ ಈ ಜಾಗೃತಿ ಅಭಿಯಾನ ನಡೆಯಲಿದ್ದು
ರಾಜ್ಯಾದ್ಯಾಂತ ಎಲ್ಲಾ ಸರಕಾರಿ ಇಲಾಖೆಗಳಲ್ಲಿ ಆಚರಿಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಕರ್ನಾಟಕ ಸರಕಾರದ ಸಚಿವಾಲಯ ಪ್ರಾಧಿಕಾರ ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಛೇರಿಗಳಿಗೆ ಸೂಚಿಸಿದ್ದು ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಯನ್ನು ರೂಪಿಸಿ ಪರಿಣಾಮಕಾರಿಯಾಗಿ ಅವುಗಳನ್ನು ಜಾರಿಗೊಳಿಸಲು ಮತ್ತು ಇಂದಿನ ವ್ಯವಸ್ಥೆಯನ್ನು ಸುಧಾರಿಸಲು ಸಂಬಂಧ ಪಟ್ಟ ಎಲ್ಲರನ್ನು ಒಗ್ಗೂಡಿಸಿ ಜಾಗೃತಿ ಮೂಡಿಸುವುದು ಈ ಸಪ್ತಾಹದ ಉದ್ದೇಶವಾಗಿದೆ.


ಈ ಹಿನ್ನಲೆಯಲ್ಲಿ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿಗಳಲ್ಲಿ ಭ್ರಷ್ಟಚಾರದ ವಿರುದ್ಧ ಜಾಗೃತಿ ಅರಿವು ಕಾರ್ಯಕ್ರಮ ಮತ್ತು ಪ್ರತಿಜ್ಞಾ ಭೋಧನವನ್ನು ನಡೆಸಲಾಯಿತು.

ಸುಳ್ಯ ನ್ಯಾಯಲಯದ ಹಿರಿಯ ಸಿವಿಲ್ ನ್ಯಾಯಧೀಶ ಬಿ.ಮೋಹನ್ ಬಾಬು ಪ್ರತಿಜ್ಞಾ ಬೋಧನೆಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ನ್ಯಾಯಾಲಯದ ಎಲ್ಲಾ ಸಿಬ್ಬಂದಿಗಳು,ಪೋಲಿಸ್ ಸಿಬ್ಬಂದಿಗಳು , ಬೋಧನೆಯನ್ನು ಸ್ವೀಕರಿದರು.

ವೇದಿಕಯಲ್ಲಿ ಸುಳ್ಯ ಕಿರಿಯ ನ್ಯಾಯಲಯದ ನ್ಯಾಯಧೀಶೆ ಕು.ಅರ್ಪಿತಾ,ಸಹಾಯ ಸರಕಾರಿ ಅಭಿಯೋಜಕರಾದ ರಮೇಶ.ಆರ್ ಹಾಗೂ ಅರೋಣ್ ಡಿಸೋಜಾ ಉಪಸ್ಥಿತರಿದ್ದರು.

ಶಿರೆಸ್ತೇದಾರ್ ಗಿರೀಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.