ಕಳೆದುಕೊಂಡ ಆರು ಮೊಬೈಲ್‌ಗಳು ವಾರಿಸುದಾರರ ಕೈಗೆ

0

ಸುಬ್ರಹ್ಮಣ್ಯ ಪೊಲೀಸರ ಕಾರ್ಯಾಚರಣೆ

ಬೇರೆ ಬೇರೆ ಸಂದರ್ಭ ಮೊಬೈಲ್ ಕಳೆದುಕೊಂಡು ದಾಖಲಾದ ಪ್ರಕರಣ ಬೆನ್ನು ಹತ್ತಿ 6 ಮೊಬೈಲ್ ಗಳನ್ನು ಪತ್ತೆ ಹಚ್ಚಿ ವಾರಿಸುದಾರರಿಗೆ ನೀಡಿದ ಘಟನೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ.

ಸುಬ್ರಹ್ಮಣ್ಯ ಠಾಣೆಯ ಎಸ್.ಐ. ಕಾರ್ತಿಕ್ ನೇತೃತ್ವದ ತಂಡವೊಂದು ಸುಬ್ರಹ್ಮಣ್ಯ ಠಾಣೆಯಲ್ಲಿ ದಾಖಲಾದ ಮೊಬೈಲ್ ಕಳೆದು ಹೋದ ಪ್ರಕರಣಗಳನ್ನು ತಕ್ಷಣವೇ ಬೆನ್ನು ಹತ್ತಿ ಲೊಕೇಶನ್ ಆಧಾರದಲ್ಲಿ ಮೊಬೈಲ್ ಗಳನ್ನು ಪತ್ತೆ ಹಚ್ಚಿ ಮೊಬೈಲ್‌ಗಳನ್ನು ಬೇರೆ ಬೇರೆ ಯವರಿಂದ ವಶಪಡಿಸಿಕೊಂಡು ವಾರಿಸುದಾರರ ಕೈ ಗೆ ಹಸ್ತಾಂತರಿಸಿದ್ದಾಗಿ ತಿಳಿದು ಬಂದಿದೆ.