ಹರಿಹರ ಪಲ್ಲತ್ತಡ್ಕ:ಪಿಡಿಒ ಪುರುಷೋತ್ತಮ ಮಣಿಯಾನ ಮನೆ ಹಾಗೂ ಆರೋಗ್ಯ ಸಹಾಯಕಿ ಮೋಹಿನಿಯವರಿಗೆ ಬೀಳ್ಕೊಡುಗೆ

0

ಹರಿಹರ ಪಲ್ಲತಡ್ಕ ಗ್ರಾ.ಪಂ ನ ಪಿಡಿಒ ಆಗಿದ್ದು ವೃತ್ತಿಯಿಂದ ನಿವೃತ್ತಿ ಹೊಂದಿದ ಮಣಿಯಾನ ಪುರುಷೋತ್ತಮ ರವರಿಗೆ ಹಾಗು ಹರಿಹರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರೋಗ್ಯ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಿ ಬಾಳಿಲಕ್ಕೆ ವರ್ಗಾವಣೆ ಹೊಂದಿದ ಮೋಹಿನಿ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಗ್ರಾಮ ಪಂಚಾಯತ್‌ನಲ್ಲಿ ಅ.31 ರಂದು ನಡೆಯಿತು.

ಗ್ರಾಮ ಪಂಚಾಯತ್ ಹಾಗು ಸಂಜೀವಿನಿ ಒಕ್ಕೂಟದವರಿಂದ ಶಾಲು ಹೊದಿಸಿ ಫಲಕಾಣಿಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ವಿಜಯ ಕುಮಾರ್ ವಹಿಸಿದ್ದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಜಯಂತ ಬಾಳುಗೋಡು, ಸದಸ್ಯರುಗಳಾದ ದಿವಾಕರ ಮುಂಡಾಜೆ, ಬಿಂದು ಗುಂಡಿಹಿತ್ಲು, ಪದ್ಮಾವತಿ ಕಲ್ಲೆಮಠ, ಶಿಲ್ಪಾ ಕೊತ್ನಡ್ಕ, ಸಂಜೀವಿನಿ ಒಕ್ಕೂಟದ ಎಮ್ ಬಿ ಕೆ ವೇದಾವತಿ ಕಲ್ಲೆಮಠ,ಅಧ್ಯಕ್ಷರಾದ ಶರ್ಮಿಲಾ ಕಟ್ಟೆಮನೆ,ಹಾಗು ಸದಸ್ಯರುಗಳು, ಪಂಚಾಯತ್ ಸಿಬ್ಬಂದಿಗಳು ಊರವರು ಹಾಜರಿದ್ದರು.


ಸವಿತರವರು ಪ್ರಾರ್ಥಿಸಿ,ಪಂಚಾಯತ್ ಪಿಡಿಒ ಶಾಂಪ್ರಸಾದ್ ಸ್ವಾಗತಿಸಿ ಧನ್ಯವಾದಗೈದರು.

ವರದಿ: ಕುಶಾಲಪ್ಪ ಕಾಂತುಕುಮೇರಿ