ಸುಬ್ರಹ್ಮಣ್ಯದ ಕೆ .ಎಸ್. ಎಸ್ ಕಾಲೇಜಿನ ಅತಿಥ್ಯದಲ್ಲಿ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜುಗಳ ಯುವಕ ಹಾಗೂ ಯುವತಿಯರ ಕ್ರಾಸ್ ಕಂಟ್ರಿ

0

ಆಳ್ವಾಸ್ ಮೂಡಬಿದಿರೆ ಚಾಂಪಿಯನ್

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಸಹಯೋಗದೊಂದಿಗೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜುಗಳ ಪುರುಷರ ಹಾಗೂ ಮಹಿಳೆಯರ ಕ್ರಾಸ್ ಕಂಟ್ರಿ (ಗುಡ್ಡಗಾಡು ಓಟ) ಚಾಂಪಿಯನ್ ನ.5 ರಂದು ನಡೆಯಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ
ಕೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ. ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ
ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭಾಗವಹಿಸಿದ್ದರು. ಸದಸ್ಯರಾದ ಶ್ರೀವತ್ಸಾ, ಶೋಭಾ ಗಿರಿಧರ್ ರಾಷ್ಟ್ರೀಯ ಕ್ರೀಡಾಪಟು ರೋಹಿತ್ ಎಂ., ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹನಿರ್ದೇಶಕ ಹರಿಪ್ರಸಾದ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ದಿನೇಶ್ ಕೆ., ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಸಾಯಿ ಗೀತಾ, ಸತೀಶ್ ಕೂಜುಗೋಡು, ಪೂರ್ವಪ್ರಾಂಶುಪಾಲರಾದ ಕೆ.ಆರ್.ಶೆಟ್ಟಿಗಾರ್, ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಲತಾ ಬಿ.ಟಿ. ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ್ ಪ್ರಸ್ತಾವಿಕ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಮಂಜೇಶ್ ಬಿ.ಜಿ. ವಂದಿಸಿದರು.

ಗುಡ್ಡಗಾಡು ಓಟಕ್ಕೆ ಚಾಲನೆ:
ಬೆಳಗ್ಗೆ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಏನೆಕಲ್ಲು ಸಮೀಪ ಬಾಲಾಡಿ ಎಂಬಲ್ಲಿ ಓಟಕ್ಕೆ ಚಾಲನೆ ನೀಡಲಾಯಿತು. ಮಹಿಳೆಯ ವಿಭಾಗ ಸ್ಪರ್ಧೆಗೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸಾ ಹಾಗೂ ಪುರುಷರ ವಿಭಾಗದ ಸ್ಪರ್ಧೆಗೆ ರಾಷ್ಟ್ರೀಯ ಅಥ್ಲೀಟ್ ರೋಹಿತ್ ಎಂ. ಚಾಲನೆ ನೀಡಿದರು.

ಫಲಿತಾಂಶ;
ಪುರುಷರ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಪ್ರಥಮ, ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ತಂಡ ಪ್ರಥಮ, ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆಯಿತು.

ಕೊಡಗು, ಉಡುಪಿ, ದ.ಕ ಜಿಲ್ಲೆಯ ಪದವಿ ಕಾಲೇಜುಗಳ ಯುವಕ ಯುವತಿಯರು ಈ ಸ್ಪರ್ಧೆಯಲ್ಲಿ ಬಾಗವಹಿಸಿದ್ದು 10 ಕಿ.ಮೀ ಗುಡ್ಡಗಾಡು ಓಟವನ್ನು ಓಡಿದರು.

ಪೋಟೋ: ಶಾಂತಲ ಸ್ಟುಡಿಯೋ ಸುಬ್ರಹ್ಮಣ್ಯ