ತಾಲೂಕು ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಸುಳ್ಯ ಎನ್ನೆoಪಿಯುಸಿ ಹುಡುಗರ ತಂಡ ಚಾಂಪಿಯನ್

0

ಕೆ ಎಸ್ ಗೌಡ ಕಾಲೇಜು ನಿಂತಿಕಲ್ಲು ಇಲ್ಲಿ ನಡೆದ ಪಿಯು ವಿಭಾಗದ ಸುಳ್ಯ ತಾಲೂಕು ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಹುಡುಗರ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

4400 ಮೀ ರಿಲೇ ಯಲ್ಲಿ ಶ್ರೇಯಸ್ ಕೆ , ಅನ್ಮೋಲ್ ಸಂದೀಪ್ ಯಾದವ್ , ಹರ್ಷಿತ್, ಪ್ರೀತಮ್ ಮುಗದೂರ್ (ಪ್ರಥಮ ).1,500 ಮೀ ಓಟ ರಿತೇಶ್ ರಮೇಶ್ ನಾಯ್ಕ್ (ಪ್ರ )ಉದ್ದ ಜಿಗಿತ ಮತ್ತು ತ್ರಿವಿಧ ಜಿಗಿತ ಸಂಕೇತ್ (ದ್ವಿತೀಯ),100ಮೀ ಓಟ ತನುಷ್ (ತೃತೀಯ )ಹ್ಯಾಮರ್ ತ್ರೋ ಕೌಶಿಕ್ (ಪ್ರ )ಚಿಂತನ್ (ತೃ ) ಪ್ರಮೋದ್ ಜಾವಲಿನ್ ತ್ರೋ(ತೃ ),ಗುಂಡೆಸೆತ ಮಣಿಕಂಠ (ಪ್ರ )ಅಬೂಬಕ್ಕರ್ ಹನಿನ್ (ದ್ವಿ ). ಹುಡುಗಿಯರ ವಿಭಾಗದ 4400ಮೀ ರಿಲೇ ಹರ್ಷಿತ, ತಂಗಮ್ಮ,ಲಶ್ಮಿತ, ಸಿಂಚನ (ದ್ವಿ )3,000ಮೀ ಓಟ ಮೋನಿಕಾ (ತೃ ). ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.