ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟದ ಧನ್ಯತಾ ಸಭೆ

0

ಅಕ್ಟೋಬರ್ ತಿಂಗಳಲ್ಲಿ ಸುಳ್ಯದಲ್ಲಿ ಶಾಲಾ ಶಿಕ್ಷಣ ಇಲಾಖೆ, ಸೈಂಟ್ ಜೋಸೆಫ್ ಹಾಗೂ ಸೈಂಟ್ ಬ್ರಿಜಿಡ್ಸ್ ಶಾಲೆಯ ವತಿಯಿಂದ ಕೊಡಿಯಾಲಬೈಲ್ ಮಹಾತ್ಮಾ ಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆ ವಠಾರದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟದ ಯಶಸ್ಸಿಗೆ ಕಾರಣಕರ್ತರಾದ ಶಾಲಾ ಆಡಳಿತ ಸಮಿತಿ, ಪೊಷಕಸಮಿತಿ,ಹಾಗೂ ಕ್ರೀಡಾಕೂಟದ ಆಯೋಜನೆಯಲ್ಲಿ ಸಹಕರಿಸಿದ ವಿವಿಧ ಸಮಿತಿಗಳಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಕ್ರೀಡಾ ವಿಕ್ರಮದ ಧನ್ಯತಾ ಸಭೆಯು ನ.21ರಂದು ಸೈಂಟ್ ಬ್ರಿಜಿಡ್ಸ್ ಸಭಾಂಗಣದಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಸಂಚಾಲಕರಾದ ರೆ. ಫಾ.ವಿಕ್ಟರ್ ಡಿ ಸೋಜಾ ವಹಿಸಿದ್ದರು.
ಶಿಕ್ಷಣ ಇಲಾಖೆ ಕ್ರೀಡಾ ಪರಿವೀಕ್ಷಕರಾದ ಸೂಫಿ ಪೆರಾಜೆ,
ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಪೋಷಕರ ಸಮಿತಿಯ ಅಧ್ಯಕ್ಷರಾದ ಗುರುಸ್ವಾಮಿ, ಜೆ.ಕೆ. ರೈ, ಸೈಂಟ್ ಬ್ರಿಜಿಡ್ಸ್ ಶಾಲೆ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅಂತೋನಿ ಮೇರಿ,ಸೈಂಟ್ ಜೊಸೆಫ್ ಶಾಲೆ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ,ನಗರ ಪಂಚಾಯತ್ ಸದಸ್ಯ ಡೇವಿಡ್ ದೀರಾ ಕ್ರಾಸ್ತ, ಮೊದಲಾದವರುವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ ಬೆಳ್ಳಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮ ಸ್ವಾಗತಿಸಿ, ಸಿಸ್ಟರ್ ಅಂತೋನಿ ಮೇರಿ ವಂದಿಸಿದರು.
ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪವೇಣಿ,ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್ ಪಂಜದಬೈಲು ಸಹಕರಿಸಿದರು.
ಸಭೆಯ ನಂತರ ಕ್ರೀಡಾ ಕೂಟದಲ್ಲಿ ಸಹಕರಿಸಿದವರಿಗೆ ಭೋಜನ ವ್ಯವಸ್ಥೆ ಮಾಡಲಾಯಿತು