ಹಿರಿಯರ ಕ್ರೀಡಾಕೂಟದಲ್ಲಿ ಬಾಲಕೃಷ್ಣ ಬೊಳ್ಳಾಜೆ – ರಾಜ್ಯಮಟ್ಟಕ್ಕೆ ಆಯ್ಕೆ

0

ಪಂಜ ಜೂನಿಯರ್ ಕಾಲೇಜು ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನ.19 ರಂದು ನಡೆದ ಸುಳ್ಯ, ಪುತ್ತೂರು, ಕಡಬ ತಾಲೂಕುಗಳ ಹಿರಿಯರ 10 ನೇ ಕ್ರೀಡಾಕೂಟದಲ್ಲಿ 50ರ ವಯೋಮಿತಿಯಲ್ಲಿ. ಪಂಜದ ಬಾಲಕೃಷ್ಣ ಬೊಳ್ಳಾಜೆ ರವರು ಭಾಗವಹಿಸಿ 800 ಮೀಟರ್ ಪ್ರಥಮ, 400 ಮೀಟರ್ ಓಟ ಪ್ರಥಮ, 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಮಂಗಳೂರು ಮಂಗಳ ಸ್ಟೇಡಿಯಂನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.