ಕೆ.ವಿ.ಜಿ. ದಂತ ಮಹಾವಿದ್ಯಾಲಯ :ತುರ್ತು ಜೀವಾಧಾರ ತರಬೇತಿ ಕಾರ್ಯಾಗಾರ

0

ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ ತುರ್ತು ಜೀವಾಧಾರ ತರಬೇತಿ ಕಾರ್ಯಗಾರವನ್ನು ಜೀವರಕ್ಷಾ ಟ್ರಸ್ಟ್ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಇವರುಗಳ ಸಹಯೋಗದೊಂದಿಗೆ ನ.೧೬, ೧೭ ಮತ್ತು ೧೮ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ, ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಾ ವಿಭಾಗ ಮುಖ್ಯಸ್ಥರಾದ ಡಾ. ಪ್ರಸನ್ನ ಕುಮಾರ್ ಡಿ., ಪ್ರಾಧ್ಯಾಪಕರಾದ ಡಾ. ಮಹಾಬಲೇಶ್ವರ ಸಿ.ಎಚ್., ಸ್ನಾತಕೋತ್ತರ ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಶರತ್‌ಕುಮಾರ್ ಶೆಟ್ಟಿ, ಕಾರ್ಯಗಾರದ ಮುಖ್ಯಸ್ಥೆ ಡಾ. ರಚನಾ ಪಿ.ಬಿ., ಡಾ. ಸಂದೀಪ್ ಹಾಗೂ ಸಾರ್ವಜನಿಕ ದಂತ ಚಿಕಿತ್ಸಾ ವಿಭಾಗದ ಡಾ. ಹೇಮಂತ್ ಬಟ್ಟೂರು ಸಹಯೋಜಕರಾಗಿ ಸಹಕರಿಸಿದ್ದರು. ೯೪ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ದಂತ ವೈದ್ಯರುಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಮೋಕ್ಷಾ ನಾಯಕ್‌ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಡಾ. ಸಂದೀಪ್‌ರವರು ಗಣ್ಯರುಗಳಾದ ಡಾ. ನಾರಾಯಣ ಹೊಳ್ಳ ರವರನ್ನು ಪರಿಚಯಿಸಿದರು.
ಡಾ. ನಾರಾಯಣ ಹೊಳ್ಳರವರು ತುರ್ತು ಜೀವಾಧಾರ ಕ್ರಮವೆಂದರೇನು, ಅದನ್ನು ಮಾಡುವ ಬಗೆ ಹೇಗೆ ಮತ್ತು ಮಹತ್ವದ ಕುರಿತು ಮಾಹಿತಿ ನೀಡಿದರು. ಯಾವುದೇ ಜಾಗದಲ್ಲಿ, ಎಂಥಹದ್ದೇ ಪರಿಸ್ಥಿತಿಯಲ್ಲಿ, ಒಬ್ಬ ಮನಷ್ಯನ ಜೀವವನ್ನು ಉಳಿಸಲು ಬೇಕಾಗುವಂತಹ ಚಾಕಚಕ್ಯತೆ ಮತ್ತು ತಿಳುವಳಿಕೆಯನ್ನು, ಕಿರುಚಿತ್ರಗಳ ಮೂಲಕ ನೀಡಿದರು ಹಾಗೂ ಮನುಷ್ಯ ಮಾದರಿಗಳ ಮೇಲೆ ಕೃತಕ ಉಸಿರಾಟ ಹಾಗೂ ಇತರ ತುರ್ತು ಜೀವಾಧಾರ ಕ್ರಮಗಳನ್ನು ಮಾಡಿ ತೋರಿಸಿದರು. ನಂತರದಲ್ಲಿ, ಇವರುಗಳ ಮೇಲ್ವಿಚಾರಣೆಯಡಿಯಲ್ಲಿ ಆ ವಿಧಾನಗಳನ್ನು ದಂತ ವೈದ್ಯರುಗಳು ಮಾಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ ದಂತ ವೈದ್ಯರುಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.