ಯೇನೆಕಲ್ಲು ಸಹಕಾರಿ ಸಂಘದ ಕ್ಯಾಲೆಂಡರ್ ಬಿಡುಗಡೆ

0

ಯೇನೆಕಲ್ಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಸಭೆಯು ನ. 28ರಂದು ನಡೆಯಿತು. ಸಭೆಯಲ್ಲಿ ಸಂಘದ ಸದಸ್ಯರಿಗೆ ಕೊಡಮಾಡುವ ಹೊಸ 2024ನೇ ವರ್ಷದ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಲಾಯಿತು. ಸಂಘದ ಅಧ್ಯಕ್ಷ ಭವಾನಿ ಶಂಕರ್ ಪೂಂಬಾಡಿ, ಉಪಾಧ್ಯಕ್ಷ ಭರತ್ ನೆಕ್ರಾಜೆ, ನಿರ್ದೇಶಕರುಗಳಾದ ಕಿರಣ್ ಕುಮಾರ್ ಮಾದನಮನೆ, ಗಿರೀಶ್ ಪದ್ಮಡ್ಕ, ರಮೇಶ್ ಬೂದಿಪಳ್ಳ, ಶ್ರೀನಿವಾಸ್ ಆಚಾರ್ಯ, ಕೇಶವ ಆಚಾರ್ಯ, ವೇದಾವತಿ ಕೋಟಿ ಗೌಡನ ಮನೆ, ಯಮುನಾ ಸಂಕಡ್ಕ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿರತನ್ ಕಲ್ಕುದಿ, ಉಪಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖರ್ ಕೇದಿಗೆಬನ ಮತ್ತು ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.