ಉದ್ಯೋಗಿಗಳೊಂದಿಗೆ ಷಷ್ಠ್ಯಬ್ಧ ಆಚರಿಸಿಕೊಂಡ ಸುಳ್ಯದ ಹಿರಿಯ ಹೋಟೆಲ್ ಉದ್ಯಮಿ

0

ದ್ವಾರಕಾ ಹೋಟೆಲ್ ಮಾಲಕ ವಸಂತ ಭಟ್ ರವರಿಗೆ 60 ರ ಸಂಭ್ರಮ

ದ್ವಾರಕಾ ಭಟ್ ಎಂದೇ ಹೆಸರುವಾಸಿಯಾಗಿರುವ ಸುಳ್ಯದ ಹಿರಿಯ ಹೋಟೆಲ್ ಉದ್ಯಮಿ ವಸಂತ ಭಟ್ ರವರ 60 ನೇ ವರ್ಷದ ಹುಟ್ಟು ಹಬ್ಬವನ್ನು ತನ್ನ ಸಂಸ್ಥೆಯ ಉದ್ಯೋಗಿಗಳೊಂದಿಗೆ
ನ.28 ರಂದು ಸರಳ ರೀತಿಯಲ್ಲಿ ಆಚರಿಸಿಕೊಂಡರು.

ಸುಳ್ಯದ ಬಾಳೆಮಕ್ಕಿ ಎಂಬಲ್ಲಿ ಕಳೆದ ಸುಮಾರು 45 ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡು ನೂರಾರು ಮಂದಿಗೆ ಉದ್ಯೋಗದಾತರಾಗಿ ಸರಳ ವ್ಯಕ್ತಿತ್ವದಿಂದ ಪ್ರಾಮಾಣಿಕ ಮತ್ತು ವಿಶ್ವಾಸಾರ್ಹ ಸೇವೆಯೊಂದಿಗೆ ಅತ್ಯಂತ ಜನಪ್ರಿಯತೆ ಗಳಿಸಿಕೊಂಡು ಯಶಸ್ವಿ ಹೋಟೆಲ್ ಉದ್ಯಮಿ ಎಂದೆನಿಸಿಕೊಂಡಿರುವ ಹೋಟೆಲ್ ದ್ವಾರಕಾ ಹಾಗೂ ದ್ವಾರಕಾ ವೆಜಿಟೇಬಲ್ಸ್ ಸಂಸ್ಥೆಯ ಮಾಲಕ ವಸಂತ ಭಟ್ ರವರು ತನ್ನ 60 ರ ಷಷ್ಠ್ಯಬ್ಧವನ್ನು ತನ್ನ ಬಂಧುಗಳು‌ ಸೇರಿದಂತೆ ಸಂಸ್ಥೆಯಉದ್ಯೋಗಿಗಳೊಂದಿಗೆ ಅತ್ಯಂತ ಸರಳ ರೀತಿಯಲ್ಲಿಆಚರಿಸಿ
ಕೊಳ್ಳುವುದರೊಂದಿಗೆ ಮಾದರಿ ವ್ಯಕ್ತಿ ಎಂದೆನಿಸಿಕೊಂಡರು.
ಸಂಸ್ಥೆಯಲ್ಲಿ
ಸುಮಾರು 35 ಕ್ಕೂ
ಹೆಚ್ಚು ಮಂದಿ ಕೆಲಸ ನಿರ್ವಹಿಸುತ್ತಿದ್ದು ಅವರ ಅಪೇಕ್ಷೆಯಂತೆ ಹೋಟೆಲಿನಲ್ಲಿಯೇ ಹುಟ್ಟು ಹಬ್ಬವನ್ನು ಸಂಪ್ರದಾಯದಂತೆ ದೀಪ ಪ್ರಜ್ವಲಿಸಿ, ಕೇಕ್ ಕತ್ತರಿಸಿ ಸಿಹಿ ಹಂಚುವುದರೊಂದಿಗೆ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಸುಜಾತ, ಸಹೋದರ ಬಹ್ರೆನ್ ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಕುಮಾರಸ್ವಾಮಿ, ಶ್ರೀಮತಿ ಮಮತಾ, ಜಯಂತ್ ಬೆಂಗಳೂರು, ಶ್ರೀಮತಿ ಅರ್ಚನ, ದ್ವಾರಕಾ ಮೆಡಿಕಲ್ಸ್ ಮಾಲಕ ಉಮೇಶ್, ಶ್ರೀಮತಿ ಶುಭಾ, ಡಾ.ಕಾರ್ತಿಕ್, ಡಾ.ಅಪೂರ್ವ, ಡಾ.ಸ್ವಸ್ತಿಕ್,ಪುತ್ರಿ ಯರಾದ ಡಾ.ಅಶ್ವಿನಿ, ಕು.ವರ್ಷಿಣಿ ಹಾಗೂ ಬಂಧು ವರ್ಗದವರು ಉಪಸ್ಥಿತರಿದ್ದರು.

ಸಂಸ್ಥೆಯ ನೌಕರರು ಅವರಿಗೆ ಶಾಲು ಹಾರಾರ್ಪಣೆಗೈದು ಫಲ ಪುಷ್ಪ ಹಾಗೂ ನೆನಪಿನ ಕಾಣಿಕೆಯನ್ನು ನೀಡುವುದರೊಂದಿಗೆ ಶುಭ ಹಾರೈಸಿದರು.
ಸಂಸ್ಥೆಯ ಹಿರಿಯ ಉದ್ಯೋಗಿ ದಾಮೋದರ, ತಿಮ್ಮಪ್ಪ, ವಿಠಲ, ವಿಶ್ವನಾಥ ಪೂಜಾರಿ ಈಶ್ವರಮಂಗಲ, ಶಶಿಧರ ತೊಡಿಕಾನ ಸೇರಿದಂತೆ ಎಲ್ಲಾ ನೌಕರರು ಭಾಗವಹಿಸಿದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.