ಬೆಳ್ಳಾರೆ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದಲ್ಲಿ ಕಾರ್ತಿಕ ಹುಣ್ಣಿಮೆಯ ವಿಶೇಷ ಕಾರ್ಯಕ್ರಮಗಳು ಸಮಾಪನ

0


ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ 18 ಪೇಟೆ ದೇವಸ್ಥಾನಗಳಲ್ಲೊಂದಾದ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ‌ ದೇವಸ್ಥಾನದಲ್ಲಿ ಏಕಹಾ ಭಜನೆ, ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನ. 23ರಿಂದ 28ರ ವರೆಗೆ ವಿಜೃಂಭಣೆಯಿಂದ ನಡೆಯಿತು.
ನ. 23ರಂದು ಸಂಜೆ ದೀಪೋಜ್ವಲನೆಗೊಂಡು ಏಕಹಾ ಭಜನೆ ಆರಂಭಗೊಂಡಿತು.

ನ. 24ರಂದು ರಾತ್ರಿ ದೇವರು ತುಳಸೀ ಕಟ್ಟೆಯಲ್ಲಿ ಆಸೀನರಾಗಿ ತುಳಸೀ ಪೂಜೆ, ಉತ್ಥಾನ ದ್ವಾದಶಿ, ರಾತ್ರಿ ಪಲ್ಲಕಿ ಉತ್ಸವ, ವಸಂತೋತ್ಸವ ನಡೆಯಿತು. ನ. 26ರಂದು ರಾತ್ರಿ ಪಲ್ಲಕಿ ಉತ್ಸವ, ವಸಂತೋತ್ಸವ, ವೈಕುಂಠ ಚತುರ್ದಶಿ ಉತ್ಸವ ನಡೆಯಿತು. ನ. 27ರಂದು ಸಂಜೆ ಕಾರ್ತಿಕ ಪೌರ್ಣಿಮ ಲಕ್ಷದೀಪ, ದೇವರು ವನಕ್ಕೆ ಚಿತ್ತೈಸುವುದು, ಧಾತ್ರಿ ಹೋಮ, ರಾತ್ರಿ ಸಿಂಗಾರಿ ಮೇಳದ ಚೆಂಡೆವಾದನ, ಬೊಂಬೆಗಳ ಕುಣಿತ, ವಾದ್ಯಘೋಷದೊಂದಿ ಲಾಲ್ಕಿ ಉತ್ಸವ, ವಸಂತೋತ್ಸವ ನಡೆಯಿತು. ನ. 28ರಂದು‌ ಅವಭೃತೋತ್ಸವ, ಅವಭೃತ ಸ್ನಾನ, ದ್ವಾದಶ ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ ಬಳಿಕ ಭೂರಿಭೋಜನ ನಡೆಯುವುದರೊಂದಿಗೆ ವಿಶೆಷ ಕಾರ್ಯಕ್ರಮಗಳು ಸಮಾಪನಗೊಂಡಿತು.