ಕೆ ವಿ ಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅಂತರ್ ಶಾಲಾ ಗಾಯನ ಸ್ಪರ್ಧೆ

0

ಬ್ರಹ್ಮಗಿರಿ ಸಹೋದಯ ಕ್ಲಸ್ಟರ್ ಮಟ್ಟದ ಅಂತರ್ ಶಾಲಾ ಗಾಯನ ಸ್ಪರ್ಧೆಯು
ಕೆ ವಿ ಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಅಡಿಟೋರಿಯಂ ನಲ್ಲಿ ಡಿ.9ರಂದು ನಡೆಯಿತು.

  ಈ ಸ್ಪರ್ಧೆಯಲ್ಲಿ ಕೆ ವಿ ಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ ಸುಳ್ಯ, ಸೈನಿಕ  ಶಾಲೆ ಕೊಡಗು, ಅಂಕೂರ್ ಪಬ್ಲಿಕ್ ಶಾಲೆ ನಾಪೋಕ್ಲು,ಎಸ್. ಎಮ್. ಎಸ್ ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಶನ್ ಅರಮೇರಿ ಮತ್ತು ಎ ಎಲ್ ಜಿ ಕ್ರೆಸೆಂಟ್ ಶಾಲೆ ಮಡಿಕೇರಿ ಇಲ್ಲಿಯ ವಿದ್ಯಾರ್ಥಿಗಳು ಭಾಗವಹಿಸಿದರು.

ಕೆ ವಿ ಜಿ ಐ ಪಿ ಎಸ್ ನ  ವಿದ್ಯಾರ್ಥಿಗಳು  ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ  ಎ ಎಲ್ ಜಿ ಕ್ರೆಸೆಂಟ್ ಸ್ಕೂಲ್ ಮಡಿಕೇರಿ ಇಲ್ಲಿಯ ಪ್ರಾಂಶುಪಾಲೆ ಜಾಯ್ಸ್ ವಿನಯ, ಕೆವಿಜಿ ಐಪಿಎಸ್ ನ ಪ್ರಾಂಶುಪಾಲ  ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ತೀರ್ಪುಗಾರರಾಗಿ ಆಗಮಿಸಿದ  ವಿದೂಷಿ ಶ್ಯಾಮಲ ಕೃಷ್ಣ, ಡಾ. ತುಷಾರ್ ಭಟ್ ಮತ್ತು ಡಾ. ಅವನಿ ವಿದ್ಯಾರ್ಥಿಗಳ ಜೊತೆ ಸೇರಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

  ಈ ಸಂದರ್ಭದಲ್ಲಿ ಮಾತನಾಡಿದ ಜಾಯ್ಸ್ ವಿನಯ

” ನಾನು ಈ ಶಾಲೆಯಲ್ಲಿ ಹತ್ತು ವರ್ಷಗಳ ಕಾಲ ದುಡಿದು, ಡಾ. ರೇಣುಕ ಪ್ರಸಾದ್ ಕೆ ವಿ, ಡಾ. ಜ್ಯೋತಿ ಆರ್ ಪ್ರಸಾದ್ ಮತ್ತು ವಿದ್ಯಾರ್ಥಿಗಳೊಂದಿಗಿನ ಆತ್ಮೀಯತೆ ಮತ್ತೆ ಮರುಕಳಿಸುತ್ತಿದೆ. ಸಂಗೀತ ಸ್ಪರ್ಧೆ ಏರ್ಪಡಿಸಲು ಇದೊಂದು ಸೂಕ್ತವಾದ ವಾತಾವರಣ. ಸಂಗೀತದ ಮೂಲಕ ನಮ್ಮ ಜೀವನವನ್ನೇ ಸಂತೋಷ ದಾಯಕವಾಗಿರಿಸಬಹುದು ಎಂದು ಹೇಳುತ್ತಾ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಕಾರ್ಯಕ್ರಮವನ್ನು ಎಂಟನೇ ತರಗತಿಯ ಕೃತಾರ್ಥ್ ಮತ್ತು ಹತ್ತನೇ ತರಗತಿಯ ಅತುಲ್ಯ ನಿರೂಪಿಸಿದರು.

ಹಿರಿಯ  ಪ್ರಾಥಮಿಕ ವಿಭಾಗದ ಗಾಯನ ಸ್ಪರ್ಧೆಯಲ್ಲಿ ಎಸ್ ಎಮ್ ಎಸ್ ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಶನ್ ಅರಮೇರಿ ಶಾಲೆ ಪ್ರಥಮ ಸ್ಥಾನವನ್ನು ಪಡೆದರೆ, ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ ದ್ವಿತೀಯ ಸ್ಥಾನವನ್ನೂ, ಸೈನಿಕ ಶಾಲೆ  ಕೊಡಗು ತೃತೀಯ ಸ್ಥಾನವನ್ನು ಪಡೆದರೆ ಅಂಕುರ್ ಪಬ್ಲಿಕ್ ಶಾಲೆ ನಾಪೋಕ್ಲು ಮತ್ತು ಎ ಎಲ್ ಜಿ ಕ್ರೆಸೆಂಟ್ ಶಾಲೆ ಮಡಿಕೇರಿ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿತು 

ಪ್ರೌಢಶಾಲಾ ವಿಭಾಗದ ಗಾಯನ ಸ್ಪರ್ಧೆಯಲ್ಲಿ ಎಸ್ ಎಮ್ ಎಸ್ ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಶನ್ ಅರಮೇರಿ ಶಾಲೆಯು ಪ್ರಥಮ ಸ್ಥಾನವನ್ನು ಪಡೆದರೆ, ಕೆ ವಿ ಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ ಸುಳ್ಯ ದ್ವಿತೀಯ ಸ್ಥಾನವನ್ನು, ಅಂಕುರ್ ಪಬ್ಲಿಕ್ ಶಾಲೆ ನಾಪೋಕ್ಲು ತೃತೀಯ ಸ್ಥಾನವನ್ನು ಪಡೆದರೆ ಎ ಎಲ್ ಜಿ ಕ್ರೆಸೆಂಟ್ ಶಾಲೆ ಮಡಿಕೇರಿ ಮತ್ತು ಸೈನಿಕ ಶಾಲೆ ಕೊಡಗು ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿತು.
ಗಾಯನ ಸ್ಪರ್ಧೆ ಮುಗಿದ ಬಳಿಕ ಕೆವಿಜಿ ಐಪಿಎಸ್ ನ ಪ್ರಾಂಶುಪಾಲ ಅರುಣ್ ಕುಮಾರ್ ಸುಂದರವಾದ ಹಾಡನ್ನು ಹೇಳುತ್ತಾ ಎಲ್ಲಾ ಸ್ಪರ್ಧಾಳುಗಳನ್ನು ಮನರಂಜಿಸಿ, ಅಭಿನಂದಿಸಿ ವಂದಿಸಿದರು. ಬಳಿಕ ಕೆಲವು ಶಿಕ್ಷಕ ವೃಂದದವರು, ತೀರ್ಪುಗಾರರು ಮತ್ತು ಕೆಲವು ವಿದ್ಯಾರ್ಥಿಗಳು ಹಾಡಿನ ಮೂಲಕ ಎಲ್ಲರನ್ನು ಸಂಗೀತ ಲೋಕಕ್ಕೆ ಕೊಂಡೊಯ್ದರು.ನಾಡಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.