ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದಲ್ಲಿ ಧನುಪೂಜೆ ಪ್ರಾರಂಭ

0

ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಧನುಮಾಸದ ಪ್ರಯುಕ್ತ ಧನುಪೂಜೆಯು ಡಿ.17ರಂದು ಬೆಳಿಗ್ಗೆ ಪ್ರಾರಂಭಗೊಂಡಿತು.

ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ಧನುಪೂಜೆಯ ಪ್ರಯುಕ್ತ ಸಂಪೂರ್ಣ ದೇವಾಲಯವನ್ನು ವಿದ್ಯುತ್ ದೀಪಾಲಂಕೃತದಿಂದ ಅಲಂಕರಿಸಲಾಗಿದ್ದು, ಕ್ಷೇತ್ರದ ಪ್ರದಾನ ಅರ್ಚಕ ಕೇಶವಮೂರ್ತಿ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ಜರುಗಿತು.

ಬೆಳಿಗ್ಗೆ 4ರಿಂದ ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ಭಜನಾ ಸಂಘದ ಮಿತ್ರಬಳಗದ ವತಿಯಿಂದ ಭಜನಾ ಸೇವೆ ನಡೆಯಿತು.

ಅರಂತೋಡು ಗ್ರಾಮದ ದೇರಾಜೆ ಬೈಲಿ‌ನಿಂದ ಭವಾನಿಶಂಕರ ಬಿಳಿಯಾರುಬನ ಅವರ ನೇತೃತ್ವದಲ್ಲಿ ಸುಮಾರು ನಲವತ್ತಕ್ಕೂ ಅಧಿಕ ಮಂದಿ ಸದಸ್ಯರುಗಳು ಮಧ್ಯರಾತ್ರಿ 12.30ಕ್ಕೆ ಹೊರಟು ಶ್ರೀ ಮಲ್ಲಿಕಾರ್ಜುನನ ಸನ್ನಿಧಿಗೆ ಪಾದಯಾತ್ರೆಯ ಮೂಲಕ ಬಂದಿದ್ದರು.

ಈ ಸಂದರ್ಭದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಕ್ಷೇತ್ರದ ಆಡಳಿತಾಧಿಕಾರಿ ರಮೇಶ್ ಬಿ.ಈ. ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವಿನ್ ರಂಗತ್ತಮಲೆ, ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರುಗಳಾದ ಕಿಶೋರ್ ಉಳುವಾರು, ಕೇಶವ ಕೊಳಲುಮೂಲೆ, ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ಎಸ್.ಪಿ. ಲೋಕನಾಥ್, ಶ್ರೀಮತಿ ಮಾಲತಿ ಬೋಜಪ್ಪ, ಕೆ.ಕೆ. ನಾರಾಯಣ, ಚಂದ್ರಪ್ರಕಾಶ್ ಪಾನತ್ತಿಲ, ಭವಾನಿಶಂಕರ ಅಡ್ತಲೆ, ಅರಂತೋಡು-ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ದೇವಾಲಯದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ, ಪಿ.ಬಿ. ಸುಧಾಕರ ರೈ, ಪಿ‌.ಬಿ. ಪ್ರಭಾಕರ ರೈ, ಚಂದ್ರಕಲಾ ನಾರಾಯಣ ಕುತ್ತಮೊಟ್ಟೆ, ಸೇರಿದಂತೆ ಸುಮಾರು ಐನೂರಕ್ಕೂ ಅಧಿಕ ಭಕ್ತಾದಿಗಳು ಉಪಸ್ಥಿತರಿದ್ದರು.